ADVERTISEMENT

ಮುಸ್ಲಿಮರ ಮನದ ಮಾತನ್ನೂ ಕೇಳಿ: ಪಿಎಂ ಮೋದಿಗೆ ಜಾಮಾ ಮಸೀದಿಯ ಶಾಹಿ ಇಮಾಮ್ ಒತ್ತಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಆಗಸ್ಟ್ 2023, 3:07 IST
Last Updated 12 ಆಗಸ್ಟ್ 2023, 3:07 IST
ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ
ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ   

ನವದೆಹಲಿ: ‘ಭಾರತೀಯ ಮುಸ್ಲಿಮರ ಮನಸ್ಸಿನ ಮಾತನ್ನೂ ಕೇಳಿ’ ಎಂದು ಜಾಮಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.

ನೂಹ್‌ ಗಲಭೆ, ಚಲಿಸುತ್ತಿದ್ದ ರೈಲಿನಲ್ಲಿ ಪೊಲೀಸ್‌ ಅಧಿಕಾರಿಯಿಂದ ನಾಲ್ವರ ಹತ್ಯೆ ಸೇರಿದಂತೆ ಇತ್ತೀಚಿನ ಘಟನೆಗಳನ್ನು ಉಲ್ಲೇಖಿಸಿದ ಅವರು, ದೇಶದಲ್ಲಿ ದ್ವೇಷದ ಚಂಡಮಾರುತ ಭುಗಿಲೇಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಲ್ಲದೆ, ಸಮುದಾಯಗಳೊಂದಿಗೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಂವಾದ ನಡೆಸಬೇಕಿದೆ ಎಂದರು.

ನೀವು ‘ಮನ್ ಕಿ ಬಾತ್’ ಎಂದು ಹೇಳುತ್ತೀರಿ ಆದರೆ ನೀವು ಮುಸ್ಲಿಮರ ‘ಮನ್ ಕಿ ಬಾತ್’ ಅನ್ನು ಸಹ ಕೇಳಬೇಕು. ಪ್ರಸ್ತುತ ಪರಿಸ್ಥಿತಿಗಳಿಂದ ಮುಸ್ಲಿಮರು ತೊಂದರೆಗೀಡಾಗಿದ್ದಾರೆ ಮತ್ತು ಅವರ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಅಹ್ಮದ್ ಬುಖಾರಿ ಪ್ರಧಾನಿ ಮೋದಿಯವರ ಮಾಸಿಕ ರೇಡಿಯೊ ಕಾರ್ಯಕ್ರಮ ಉಲ್ಲೇಖಿಸಿ ಹೇಳಿದರು. 

ADVERTISEMENT

ಧ್ವೇಷ ಮತ್ತು ಸಮುದಾಯಗಳ ನಡುವಿನ ಗಲಾಟೆಯಿಂದ ಕಾನೂನು ದುರ್ಬಲವಾಗುತ್ತಿದೆ ಎಂದ ಅವರು, ಹಿಂದೂ-ಮುಸ್ಲಿಂ ನಡುವಿನ ಸಂಬಂಧ ಅಪಾಯದಂಚಿನಲ್ಲಿದೆ. ಭಾರತದಲ್ಲಿ ಏಕೆ ಈ ದ್ವೇಷ? ನಮ್ಮ ಪೂರ್ವಜರು ಸ್ವಾತಂತ್ರ್ಯ ಗಳಿಸಿದ್ದು ಈ ದಿನಕ್ಕಾಗಿಯೇ? ‌ಪರಿಸ್ಥಿತಿಯನ್ನು ನಿಯಂತ್ರಿಸುವುದು ಸರ್ಕಾರದ ಕೈಯಲ್ಲಿದೆ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.