ADVERTISEMENT

Jammu and Kashmir | ಅಮರನಾಥ ಯಾತ್ರೆ ವೇಳೆ ಮೃತಪಟ್ಟವರ ಸಂಖ್ಯೆ 36ಕ್ಕೆ ಏರಿಕೆ

ಪಿಟಿಐ
Published 22 ಜುಲೈ 2023, 15:48 IST
Last Updated 22 ಜುಲೈ 2023, 15:48 IST
ಅಮರನಾಥ ಯಾತ್ರೆ
ಅಮರನಾಥ ಯಾತ್ರೆ   ಪ್ರಾತಿನಿಧಿಕ ಚಿತ್ರ

ಶ್ರೀನಗರ: ಅಮರನಾಥ ಯಾತ್ರೆ ಕೈಗೊಂಡಿದ್ದ ಯಾತ್ರಿಕರಿಬ್ಬರು ಮೃತಪಟ್ಟಿದ್ದು, ಇದರೊಂದಿಗೆ ಈ ವರ್ಷದ ಯಾತ್ರೆ ವೇಳೆ ಮೃತಪಟ್ಟವರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಯಾತ್ರಿಕರಿಬ್ಬರೂ ರಾಜಸ್ಥಾನದವರಾಗಿದ್ದು, ಪತೇ ಲಾಲ್‌ ಮನಾರಿಯಾ ಮತ್ತು ಮಂಗಿ ಲಾಲ್ ಎಂದು ಗುರುತಿಸಲಾಗಿದೆ. ಇಬ್ಬರಿಗೂ 60 ವರ್ಷ ವಯಸ್ಸಾಗಿದೆ. ಫತೇಹ್‌ ಲಾಲ್‌ ಅವರು ಪವಿತ್ರ ಗುಹಾಲಯದ ಸಮೀಪ ಮತ್ತು ಮಂಗಿಲಾಲ್‌ ಅವರು ಬಲ್ತಾಲ್‌ ಮೂಲ ಶಿಬಿರದ ಬಳಿ ಮೃತಪಟ್ಟಿದ್ದಾರೆ.

ಮನಾರಿಯಾ ಅವರಿಗೆ ಹೃದಯ ಸ್ತಂಭನವಾಗಿದೆ. ಮಂಗಿಲಾಲ್‌ ಅವರ ಸಾವಿಗೆ ಕಾರಣವೇನೆಂಬುದು ಇನ್ನಷ್ಟೇ ಖಚಿತವಾಗಬೇಕಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.