ADVERTISEMENT

ಜಮ್ಮು ಮತ್ತು ಕಾಶ್ಮೀರ: ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿದ ಸೇನೆ

ಪಿಟಿಐ
Published 31 ಜನವರಿ 2026, 5:39 IST
Last Updated 31 ಜನವರಿ 2026, 5:39 IST
<div class="paragraphs"><p>ಭದ್ರತಾ ಸಿಬ್ಬಂದಿ (ಪ್ರಾತಿನಿಧಿಕ ಚಿತ್ರ)</p></div>

ಭದ್ರತಾ ಸಿಬ್ಬಂದಿ (ಪ್ರಾತಿನಿಧಿಕ ಚಿತ್ರ)

   

ಕೃಪೆ: ಪಿಟಿಐ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್‌ ಪ್ರದೇಶದಲ್ಲಿ ಉಗ್ರರು ಅಡಗಿರುವುದು ಪತ್ತೆಯಾಗಿದ್ದು, ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಸೇನಾಧಿಕಾರಿಗಳು ಶನಿವಾರ ಬೆಳಿಗ್ಗೆ ತಿಳಿಸಿದ್ದಾರೆ.

ADVERTISEMENT

ಎಲ್ಲ ಮೂಲಗಳಿಂದ ಲಭ್ಯವಾಗಿರುವ ಗುಪ್ತಚರ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದಿರುವುದಾಗಿ ಸೇನೆ ತಿಳಿಸಿದೆ.

'ವೈಟ್‌ ನೈಟ್‌ ಕಾರ್ಪ್ಸ್‌, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸಿಆರ್‌ಪಿಎಫ್‌ ಪಡೆಗಳು ಡೊಲ್ಗಾಮ್‌ ಪ್ರದೇಶದಲ್ಲಿ ಜನವರಿ 31ರ ಬೆಳಿಗ್ಗೆ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಉಗ್ರರು ಸಂಪರ್ಕಕ್ಕೆ ಬಂದಿದ್ದಾರೆ' ಎಂದು 'ವೈಟ್‌ ನೈಟ್‌ ಕಾರ್ಪ್ಸ್‌' ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ತಿಳಿಸಿದೆ.

ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದೂ ಉಲ್ಲೇಖಿಸಿದೆ.

ಈ ಪ್ರದೇಶದಲ್ಲಿ ಕಳೆದ 15 ದಿನಗಳಲ್ಲಿ ಉಗ್ರರು ನಾಲ್ಕನೇ ಬಾರಿಗೆ ಭದ್ರತಾ ಪಡೆಗಳ ಸಂಪರ್ಕಕ್ಕೆ ಬಂದಿದ್ದಾರೆ.

ಜಿಲ್ಲೆಯಲ್ಲಿ ಅಡಗಿರುವ ಜೈಶ್‌–ಎ–ಮೊಹಮ್ಮದ್‌ ಉಗ್ರರನ್ನು ಹೊಡೆದುರುಳಿಸುವ ಕಾರ್ಯಾಚರಣೆ ಮುಂದುವರಿದಿದ್ದು, ಸೇನಾ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್ ಪ್ರತೀಕ್‌ ಶರ್ಮಾ ಅವರು ಕಿಶ್ತ್‌ವಾರ್‌ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ದೇಶ ವಿರೋಧಿ ಶಕ್ತಿಗಳನ್ನು ನಿಷ್ಕ್ರಿಯಗೊಳಿಸುವ ಸಲುವಾಗಿ ಸಿಂಗ್‌ಪೋರಾ, ಚಿಂಗಮ್‌ ಮತ್ತು ಚತ್ರೂ ಜಿಲ್ಲೆಗಳನ್ನು ಒಳಗೊಂಡ 6 ಕಿ.ಮೀ. ವ್ಯಾಪ್ತಿಯಲ್ಲಿ ಮೊಬೈಲ್‌ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.