ADVERTISEMENT

ಕೋವಿಡ್–19 | ಜಮ್ಮು ಕಾಶ್ಮೀರದಲ್ಲಿ ಆಗಸ್ಟ್‌ 5ರ ವರೆಗೆ ಲಾಕ್‌ಡೌನ್ ಮುಂದುವರಿಕೆ

ಏಜೆನ್ಸೀಸ್
Published 2 ಆಗಸ್ಟ್ 2020, 6:42 IST
Last Updated 2 ಆಗಸ್ಟ್ 2020, 6:42 IST
ಶ್ರೀನಗರದ ಲಾಲ್‌ ಚೌಕ್ ಭಾನುವಾರ ಕಂಡು ಬಂದಿದ್ದ ಹೀಗೆ (ಎಎನ್‌ಐ ಚಿತ್ರ)
ಶ್ರೀನಗರದ ಲಾಲ್‌ ಚೌಕ್ ಭಾನುವಾರ ಕಂಡು ಬಂದಿದ್ದ ಹೀಗೆ (ಎಎನ್‌ಐ ಚಿತ್ರ)   
ಶ್ರೀನಗರ:ರಾಜ್ಯದಲ್ಲಿ ಕೋವಿಡ್–19 ಲಾಕ್‌ಡೌನ್ ನಿರ್ಬಂಧಗಳನ್ನು ಆಗಸ್ಟ್‌ 5ರ ವರೆಗೆ ಮುಂದುವರಿಸುವುದಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ತಿಳಿಸಿದೆ.
ಜುಲೈ 31ರ ವರೆಗೆ ಲಾಕ್‌ಡೌನ್‌ ಮುಂದುವರಿಸಲಾಗುವುದು ಎಂದು ಸರ್ಕಾರವು ತನ್ನ ಹಿಂದಿನ ಆದೇಶದಲ್ಲಿ ತಿಳಿಸಿತ್ತು.
ದೇಶದಾದ್ಯಂತ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಲಾಕ್‌ಡೌನ್ ನಿರ್ಬಂಧಗಳನ್ನು ವಿಸ್ತರಿಸುವುದು ಸೂಕ್ತ ಎಂದು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಜಮ್ಮು ಕಾಶ್ಮೀರದಲ್ಲಿ ಶನಿವಾರ ಹೊಸದಾಗಿ 613 ಸೋಂಕು ಪ್ರಕರಣಗಳು ವರದಿಯಾಗಿದ್ದು, 11 ಜನರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 20,972ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.