ADVERTISEMENT

ಜಮ್ಮು ಮತ್ತು ಕಾಶ್ಮೀರ: ಅಧಿಕಾರಿಗಳ ಕೇಡರ್‌ನಲ್ಲೂ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 19:31 IST
Last Updated 29 ಅಕ್ಟೋಬರ್ 2019, 19:31 IST

ನವದೆಹಲಿ: ನೂತನ ‘ಜಮ್ಮು ಮತ್ತುಕಾಶ್ಮೀರ’ ಹಾಗೂ ‘ಲಡಾಖ್‌’ ಕೇಂದ್ರಾಡಳಿತ ಪ್ರದೇಶಗಳು ಗುರುವಾರ ಅಸ್ತಿತ್ವಕ್ಕೆ ಬರಲಿವೆ. ಜತೆಗೆ ಕೇಂದ್ರಸೇವೆಯ ಅಧಿಕಾರಿಗಳ ಕೇಡರ್‌ನಲ್ಲಿಯೂ ಬದಲಾವಣೆ ಆಗಲಿದೆ.

ಸದ್ಯ, ನಿಯೋಜನೆಗೊಂಡಿರುವ ಕೇಂದ್ರ ಸೇವೆ ಅಧಿಕಾರಿಗಳು ಜಮ್ಮುಮತ್ತು ಕಾಶ್ಮೀರ ಕೇಡರ್‌ನ ಅಧಿಕಾರಿಗಳಾಗೇ ಮುಂದುವರಿಯುವರು. ಇನ್ನು ಮುಂದೆ ಈ ಭಾಗಗಳಿಗೆ ನೇಮಕವಾಗುವ ಅಧಿಕಾರಿಗಳನ್ನು ಕೇಂದ್ರಾಡಳಿತ ಪ್ರದೇಶಗಳ ಕೇಡರ್ ಎಂದೇ (ಎಜಿಎಂಯುಟಿ) ಎಂದೇ ಪರಿಗಣಿಸಲಾಗುತ್ತದೆ.

ಹೊಸ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನಂಟ್ ಗವರ್ನರ್‌ಗಳು ಆದೇಶ ನೀಡುವವರೆಗೆ ಅಧಿಕಾರಿಗಳು ಹಾಲಿ ಸ್ಥಾನದಲ್ಲೇ ಮುಂದುವರಿಯುವರು.

ADVERTISEMENT

ಗಿರೀಶ್‌ ಚಂದ್ರ ಮುರ್ಮು ಹಾಗೂ ರಾಧಾ ಕೃಷ್ಣ ಮಾಥೂರ್ ಅವರನ್ನು ಕ್ರಮವಾಗಿ ಜಮ್ಮು ಮತ್ತುಕಾಶ್ಮೀರ ಹಾಗೂ ಲಡಾಖ್‌ನ ಲೆಫ್ಟಿನಂಟ್‌ ಗವರ್ನರ್ ಆಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.