ADVERTISEMENT

ಜಮ್ಮು ಮತ್ತು ಕಾಶ್ಮೀರ |  ಸರ್ಕಾರವನ್ನು ಟೀಕೆ ಮಾಡಿದ ಸರ್ಕಾರಿ ಶಿಕ್ಷಕ ಅಮಾನತು

ಜಮ್ಮು ಮತ್ತು ಕಾಶ್ಮೀರ ಆಡಳಿತದ ನೀತಿಯನ್ನು ಫೇಸ್‌ಬುಕ್‌ನಲ್ಲಿ ಟೀಕೆ ಮಾಡಿದ್ದ ಶಿಕ್ಷಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2023, 5:55 IST
Last Updated 25 ಫೆಬ್ರುವರಿ 2023, 5:55 IST
   

ಶ್ರೀನಗರ: ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನು ಟೀಕೆ ಮಾಡಿದ ಶಿಕ್ಷಕರೊಬ್ಬರನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತವು ಅಮಾನತು ಮಾಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ರಾಮ್‌ಬನ್‌ ಜಿಲ್ಲೆಯ ಜೋಗಿಂದರ್‌ ಸಿಂಗ್‌ ಎಂಬವರೇ ಅಮಾನತಿಗೆ ಒಳಗಾದ ಶಿಕ್ಷಕ.

ಜಮ್ಮು ಕೇಂದ್ರಾಡಳಿತ ಪ್ರದೇಶದ ನೀತಿಗಳನ್ನು ವಿರೋಧಿಸಿ ಜೋಗಿಂದರ್‌ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದರು.

ADVERTISEMENT

ಸಾಮಾಜಿಕ ಜಾಲತಾಣಗಲ್ಲಿ ಸರ್ಕಾರವನ್ನು ಟೀಕೆ ಮಾಡಬಾರದು ಎಂದು ಆಡಳಿತ ಎಚ್ಚರಿಕೆ ನೀಡಿದ ಒಂದು ವಾರದಲ್ಲಿ ಜೋಗಿಂದರ್‌ ಅವರನ್ನು ಅಮಾನತು ಮಾಡಲಾಗಿದೆ.

ಸರ್ಕಾರದ ನೀತಿಗಳನ್ನು ಟೀಕೆ ಮಾಡಬಾರದು ಎಂದು ಸರ್ಕಾರ ಹೊರಡಿಸಿದ್ದ ನಿರ್ದೇಶನವನ್ನು ಮುರಿದಿದ್ದಕ್ಕೆ ಅವರನ್ನು ಅಮಾನತು ಮಾಡಲಾಗಿದೆ ಎಂದು ಆಡಳಿತ ತಿಳಿಸಿದೆ.

ಅದರೆ ಸರ್ಕಾರದ ಯಾವ ನೀತಿಯನ್ನು ಟೀಕೆ ಮಾಡಿದ್ದಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವುದರ ಬಗ್ಗೆ ಆಡಳಿತ ಉಲ್ಲೇಖಿಸಿಲ್ಲ.

ಸರ್ಕಾರಿ ನೌಕರರು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ನೀತಿಗಳನ್ನು ಟೀಕೆ ಮಾಡಕೂಡದು ಎಂದು ಮುಖ್ಯಕಾರ್ಯದರ್ಶಿ ಅರುಣ್‌ ಕುಮಾರ್ ಮೆಹ್ತಾ ಅವರು ಕಳೆದ ವಾರ ಎಚ್ಚರಿಕೆ ನೀಡಿದ್ದರು. ಅಲ್ಲದೇ ತಮ್ಮ ಉದ್ಯೋಗಿಗಳ ಸಾಮಾಜಿಕ ಜಾಲತಾಣಗಳ ಖಾತೆ ಮೇಲೆ ನಿಗಾ ವಹಿಸಬೇಕು ಎಂದು ಎಂದು ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.