ADVERTISEMENT

ಜಮ್ಮು: ಮಹಿಳೆಯರ ಕಣ್ಗಾವಲಿನಲ್ಲಿ ಗ್ರಾಮ

ಕೋವಿಡ್‌19 ನಿಯಂತ್ರಣಕ್ಕೆ ಕೋಲು ಹಿಡಿದು ಬಿಗಿ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 16:23 IST
Last Updated 10 ಏಪ್ರಿಲ್ 2020, 16:23 IST

ಛತ್ತಾ ಪಿಂಡ್‌ (ಜಮ್ಮು): ಜಮ್ಮು ನಗರದಿಂದ ಕೆಲವೇ ಕಿಲೋ ಮೀಟರ್‌ ದೂರದಲ್ಲಿರುವ ಈ ಗ್ರಾಮದಲ್ಲಿ ಈಗ ಬಿಗಿ
ಬಂದೋಬಸ್ತ್‌ ಹಾಕಲಾಗಿದೆ.

ಇಲ್ಲಿ ಕೋಲು ಹಿಡಿದು ಪಹರೆ ಕಾಯುತ್ತಿರುವವರೆಲ್ಲರೂ ಮಹಿಳೆಯರು. ಗ್ರಾಮಕ್ಕೆ ಯಾರೂ ಪ್ರವೇಶಿಸದಂತೆ ತಂತಿ ಬೇಲಿ ಹಾಕಲಾಗಿದೆ.
ಜತೆಗೆ, ಲಾಕ್‌ಡೌನ್‌ ನಿಯಮ ಉಲ್ಲಂಘನೆಯಾಗದಂತೆ ಕ್ರಮಕೈಗೊಳ್ಳಲು ಮಹಿಳೆಯರು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4ರವರೆಗೆ
ಕೋಲು ಹಿಡಿದು ಕಾವಲು ಕಾಯುತ್ತಿದ್ದಾರೆ. ಪೊಲೀಸರು ಸಹ ಇವರಿಗೆ ನೆರವು ನೀಡುತ್ತಿದ್ದಾರೆ.

ಸುಮಾರು 6,500 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಕೊರೊನಾ ವೈರಸ್‌ ಹಬ್ಬದಂತೆ ಮಹಿಳೆಯರೇ ಮುಂದಾಗಿ ಈ
ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದಾರೆ.

ADVERTISEMENT

ಜಮ್ಮುನಿನಲ್ಲಿ ಕೊರೊನಾ ವೈರಸ್‌ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿದ್ದಂತೆ ಮಹಿಳೆಯರು ಜಾಗೃತರಾದರು. ಮಾಜಿ ಸರಪಂಚರಾದ
ಗುರುಮೀತ್‌ ಕೌರ್‌ ಅವರ ನೇತೃತ್ವದಲ್ಲಿ ಕಾವಲು ಕಾಯುವ ವ್ಯವಸ್ಥೆ ಮಾಡಲಾಗಿದೆ.

‘ಕೋವಿಡ್‌–19 ಮಾರಣಾಂತಿಕ ಕಾಯಿಲೆಯಾಗಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಪೊಲೀಸ್‌ ಮತ್ತು ಸರ್ಕಾರಕ್ಕೆ ನೆರವು ನೀಡುವುದು
ನಮ್ಮ ಕರ್ತವ್ಯವಾಗಿದೆ. ಹೀಗಾಗಿ, ನಮ್ಮ ಗ್ರಾಮವನ್ನು ಕಾಪಾಡಲು ಮುಂದಾಗಿದ್ದೇವೆ’ ಎಂದು ಗುರುಮೀತ್‌ ಕೌರ್‌ ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ 45 ಪ್ರದೇಶಗಳನ್ನು ಅಪಾಯದ ವಲಯಗಳೆಂದು ಗುರುತಿಸಲಾಗಿದೆ. ಇವುಗಳಲ್ಲಿ 26 ವಲಯಗಳು ಕಾಶ್ಮೀರ ಪ್ರದೇಶದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.