ADVERTISEMENT

ಜಮ್ಮು: ಸ್ಫೋಟಕ ಸಾಗಿಸುತ್ತಿದ್ದ ಡ್ರೋನ್‌ ಹೊಡೆದುರುಳಿಸಿದ ಪೊಲೀಸರು

ಪಿಟಿಐ
Published 23 ಜುಲೈ 2021, 7:33 IST
Last Updated 23 ಜುಲೈ 2021, 7:33 IST
ಜಮ್ಮು ಜಿಲ್ಲೆಯ ಅಖನೂರ್ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುಂಡು ಹಾರಿಸಿ ಹೊಡೆದುರಳಿಸಿದ ಡೋನ್‌. ಈ ಡ್ರೋನ್‌ನಿಂದ ಐದು ಕೆ.ಜಿ ತೂಕದ (ಐಇಡಿ) ಸ್ಫೋಟಕ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.
ಜಮ್ಮು ಜಿಲ್ಲೆಯ ಅಖನೂರ್ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುಂಡು ಹಾರಿಸಿ ಹೊಡೆದುರಳಿಸಿದ ಡೋನ್‌. ಈ ಡ್ರೋನ್‌ನಿಂದ ಐದು ಕೆ.ಜಿ ತೂಕದ (ಐಇಡಿ) ಸ್ಫೋಟಕ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.   

ಜಮ್ಮು: ಜಮ್ಮು ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಭಾಗದ ಸಮೀಪದಲ್ಲಿ ಹಾರಾಟ ನಡೆಸುತ್ತಿದ್ದ ಡ್ರೋನ್‌ ಅನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶುಕ್ರವಾರ ಹೊಡೆದುರುಳಿಸಿ, ಅದರಿಂದ ಐದು ಕೆಜಿ ತೂಕದ ಐಇಡಿ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಗುರುವಾರ ರಾತ್ರಿ ದೊರೆತ ಖಚಿತ ಮಾಹಿತಿ ಮೇರೆಗೆ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಭಾಗದ ಕಂಚಕ್‌ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯ ಕ್ಷಿಪ್ರ ಕಾರ್ಯ ಪಡೆ (ಕ್ಯುಆರ್‌ಟಿ)ಯವರು, ಸ್ಪೋಟಕ ಸಾಗಿಸುತ್ತಿದ್ದ ಡ್ರೋನ್‌ ಹೊಡೆದುಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಪೋಟಕಗಳನ್ನು ಹೊತ್ತ ಡ್ರೋನ್‌, ಅಂತರರಾಷ್ಟ್ರೀಯ ಗಡಿಯಲ್ಲಿ 7 ರಿಂದ 8 ಕಿಲೋಮೀಟರ್‌ ಒಳಭಾಗದಲ್ಲಿ ಹಾರಾಟ ನಡೆಸುತ್ತಿತ್ತು ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.