ADVERTISEMENT

ಕಾಶ್ಮೀರದಲ್ಲಿ ಹಿಮದ ಹೊದಿಕೆ, ಜಮ್ಮು–ಶ್ರೀನಗರ ಹೆದ್ದಾರಿ ಬಂದ್‌

ಏಜೆನ್ಸೀಸ್
Published 5 ಜನವರಿ 2019, 6:10 IST
Last Updated 5 ಜನವರಿ 2019, 6:10 IST
ಕಾಶ್ಮೀರ ಕಣಿವೆಯಲ್ಲಿ ಹಿಮಾವೃತವಾಗಿರುವ ದೃಶ್ಯ. ಚಿತ್ರ: ಎಎನ್‌ಐ ಟ್ವಿಟ್‌
ಕಾಶ್ಮೀರ ಕಣಿವೆಯಲ್ಲಿ ಹಿಮಾವೃತವಾಗಿರುವ ದೃಶ್ಯ. ಚಿತ್ರ: ಎಎನ್‌ಐ ಟ್ವಿಟ್‌   

ಶ್ರೀನಗರ:ಉತ್ತರ ಭಾರತದಲ್ಲಿ ಕೊರೆಯುವ ಚಳಿ ಇದ್ದು, ಜಮ್ಮು ಕಾಶ್ಮೀರದಲ್ಲಿ ಹಿಮದ ಹೊದಿಕೆ ಹಾಕಿದಂತಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ಹಿಮ ಬೀಳುತ್ತಿದ್ದು, ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಶನಿವಾರಬಂದ್ ಆಗಿದೆ.

ಭಾರಿ ಪ್ರಮಾಣದಲ್ಲಿ ಹಿಮಾವೃತವಾಗಿರುವುದರಿಂದ ವಾಹನಗಳು ಚಲಿಸಲು ಸಾಧ್ಯವಾಗದೆ ಸಾಲುಗಟ್ಟಿ ನಿಂತಿವೆ.

ADVERTISEMENT

ಗಿರಿ ಶೀಖರ, ಮನೆಗಳ ಮೇಲ್ಚಾವಣಿ, ಗಿಡಿ ಮರಗಳು, ವಾಹನಗಳ ಮೇಲೆ ದಪ್ಪನಾಗಿ ಹಿಮ ಬಿದ್ದಿದ್ದು, ಇಡೀ ಪ್ರದೇಶವೇ ಹಾಲು ಚೆಲ್ಲಿದಂತೆ ಕಾಣುತ್ತಿದೆ. ಹಿಮದ ಕಚಗುಳಿ ಅನುಭವಿಸಲು ಪ್ರವಾಸಿಗಳು ಅತ್ತ ತೆರಳುತ್ತಿದ್ದಾರೆ. ಇನ್ನು ಅಲ್ಲಿನ ನಿವಾಸಿಗಳಿಗೆ, ಪ್ರಾಣಿಗಳಿಗೆ ಜೀವನವೇ ಕಷ್ಟವಾಗುತ್ತಿದೆ.

ಕಾಶ್ಮೀರ ಕಣಿವೆಯಲ್ಲಿ ಹಿಮಾವೃತವಾಗಿರುವ ದೃಶ್ಯ. ಚಿತ್ರ: ಎಎನ್‌ಐ ಟ್ವಿಟ್‌

ಮಕ್ಕಳು ಹಿಮದಲ್ಲಿ ಮೋಜಿನಾಟವಾಡುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ರಸ್ತೆಗಳ ಮೇಲೆ ದಟ್ಟವಾಗಿ ಬೀಳುತ್ತಿರುವ ಹಿಮವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

ದಿನದಿಂದ ದಿನಕ್ಕೆ ಕನಿಷ್ಠ ತಾಪಮಾನ ದಾಖಲಾಗುತ್ತಿದೆ.

ಹಿಮಾವೃತವಾಗಿರುವುದರಿಂದ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಶನಿವಾರಬಂದ್ ಆಗಿದೆ.

ಕಾಶ್ಮೀರ ಕಣಿವೆಯಲ್ಲಿ ಹಿಮಾವೃತವಾಗಿರುವ ದೃಶ್ಯ. ಚಿತ್ರ: ಎಎನ್‌ಐ ಟ್ವಿಟ್‌
ಕಾಶ್ಮೀರ ಕಣಿವೆಯಲ್ಲಿ ಹಿಮಾವೃತವಾಗಿರುವ ದೃಶ್ಯ. ಚಿತ್ರ: ಪಿಟಿಐ
ಕಾಶ್ಮೀರ ಕಣಿವೆಯಲ್ಲಿ ಹಿಮಾವೃತವಾಗಿರುವ ದೃಶ್ಯ. ಚಿತ್ರ: ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.