ADVERTISEMENT

ಒಡಿಶಾ: ಬಿಜೆಪಿ ಶಾಸಕ ಪ್ರಮಾಣವಚನ ಸ್ವೀಕಾರ; ಸದನದಲ್ಲಿ ಸಂಖ್ಯಾಬಲ 79ಕ್ಕೆ ಏರಿಕೆ

ಪಿಟಿಐ
Published 20 ನವೆಂಬರ್ 2025, 10:09 IST
Last Updated 20 ನವೆಂಬರ್ 2025, 10:09 IST
<div class="paragraphs"><p>ಬಿಜೆಪಿ</p></div>

ಬಿಜೆಪಿ

   

ಭುವನೇಶ್ವರ: ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿಯ ನೂತನ ಶಾಸಕ ಜೈ ಧೋಲಕಿಯಾ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಆಡಳಿತಾರೂಢ ಬಿಜೆಪಿ ಪಕ್ಷದ ಸಂಖ್ಯಾಬಲ 79ಕ್ಕೆ ಏರಿದೆ. 

ಒಡಿಶಾ ವಿಧಾನಸಭಾಧ್ಯಕ್ಷೆ ಸುರಮಾ ಅವರು ಬಿಜೆಪಿಯ ಹಿರಿಯ ನಾಯಕರ ಸಮ್ಮುಖದಲ್ಲಿ ಜೈ ಧೋಲಕಿಯಾ ಅವರಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಧೋಲಕಿಯಾ ಅವರ ತಾಯಿ ಕಲ್ಪನಾ ಧೋಲಕಿಯಾ ಹಾಗೂ ಕುಟುಂಬದ ಇತರ ಸದಸ್ಯರು ಕೂಡ ಉಪಸ್ಥಿತರಿದ್ದರು.

ADVERTISEMENT

ನೌಪಾದ್‌ ವಿಧಾನಸಭೆ ಕ್ಷೇತ್ರದ ಬಿಜೆಡಿ ಶಾಸಕ ರಾಜೇಂದ್ರ ಧೋಲಕಿಯಾ ಅವರು ನಿಧನರಾದ್ದರಿಂದ ನವೆಂಬರ್ 11ರಂದು ಉಪಚುನಾವಣೆ ನಡೆದಿತ್ತು. ರಾಜೇಂದ್ರ ಧೋಲಕಿಯಾ ಅವರ ಪುತ್ರ ಜೈ ಧೋಲಕಿಯಾ ಉಪಚುನಾವಣೆಗೂ ಮುನ್ನಾ ಬಿಜೆಪಿ ಸೇರಿದ್ದರು. ಜೈ ಧೋಲಕಿಯಾ ಅವರು ಕಾಂಗ್ರೆಸ್‌ ಅಭ್ಯರ್ಥಿಯನ್ನು 83 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು. ಬಿಜೆಡಿ ಅಭ್ಯರ್ಥಿ ಮೂರನೇ ಸ್ಥಾನ ಪಡೆದರು

ಒಡಿಶಾ ವಿಧಾನಸಭೆಯು 147 ಸದಸ್ಯರ ಸಂಖ್ಯಾಬಲ ಹೊಂದಿದ್ದು ಸರಳ ಬಹುಮತಕ್ಕೆ 74 ಸದಸ್ಯರ ಅಗತ್ಯವಿದೆ. ಇದರಲ್ಲಿ ಬಿಜೆಪಿ 79 ಸ್ಥಾನಗಳನ್ನು ಹೊಂದಿದ್ದು ಅಧಿಕಾರ ನಡೆಸುತ್ತಿದೆ. ವಿರೋಧ ಪಕ್ಷ ಬಿಜೆಡಿ 50, ಕಾಂಗ್ರೆಸ್‌ 14, ಮೂವರು ಸ್ವತಂತ್ರರು ಸೇರಿ ಸಿಪಿಐ(ಎಂ) ಪಕ್ಷದಿಂದ ಒಬ್ಬರು ಶಾಸಕರಿದ್ದಾರೆ. 

ಈ ಗೆಲುವಿನ ಮೂಲಕ ಬಿಜೆಪಿ ಸಂಖ್ಯಾ ಬಲ 79ಕ್ಕೆ ಏರಿಕೆಯಾಗಿದ್ದು, ಬಿಜೆಡಿ ಬಲ 50ಕ್ಕೆ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.