ನವದೆಹಲಿ: ಎಂಜಿನಿಯರಿಂಗ್ ಪ್ರವೇಶಕ್ಕೆ ನಡೆಸಲಾಗುವ ಎರಡನೇ ಆವೃತ್ತಿಯ ಜೆಇಇ (ಮೇನ್) ಪರೀಕ್ಷೆಯ ಫಲಿತಾಂಶ ಏ. 19ರಂದು ಪ್ರಕಟವಾಗಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಪರೀಕ್ಷಾ ಏಜೆನ್ಸಿಯ (NTA) ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ಅಂತಿಮ ಕೀ ಉತ್ತರಗಳನ್ನು ಶುಕ್ರವಾರ ಪ್ರಕಟಿಸಲಾಗಿದೆ.
‘2025ರ ಜೆಇಇ (ಮೇನ್) 2ನೇ ಆವೃತ್ತಿಯ ಅಂತಿಮ ಕೀ ಉತ್ತರಗಳನ್ನು ಜೆಇಇ (ಮೇನ್) ಅಂತರ್ಜಾಲ ಪುಟದಿಂದ ಇಂದಿನಿಂದ (ಏ. 18) ಡೌನ್‌ಲೋಡ್ ಮಾಡಿಕೊಳ್ಳಬಹುದು. ಫಲಿತಾಂಶ ಶನಿವಾರ (ಏ. 19ಕ್ಕೆ) ಪ್ರಕಟಗೊಳ್ಳಲಿದೆ’ ಎಂದಿದ್ದಾರೆ.
ಈ ಹಿಂದೆ ನಡೆಸಲಾಗಿದ್ದ ಪರೀಕ್ಷೆಯ ಕೀ ಉತ್ತರಗಳಲ್ಲಿ ಹಲವು ದೋಷಗಳಿರುವುದನ್ನು ಬಹಳಷ್ಟು ವಿದ್ಯಾರ್ಥಿಗಳು ಎನ್‌ಟಿಎ ಗಮನಕ್ಕೆ ತಂದಿದ್ದರು. ಯಾವುದೇ ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಈ ವಾರ ಪ್ರಕಟವಾಗುವ ಕೀ ಉತ್ತರಕ್ಕಾಗಿ ಕಾಯುವಂತೆ ಏಜೆನ್ಸಿ ಇವರಿಗೆ ಹೇಳಿತ್ತು.
ಏ. 2, 3, 4, 7 ಮತ್ತು 8ರಂದು ಪರೀಕ್ಷೆ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.