ADVERTISEMENT

ಜೆಇಇ–ಮೇನ್ ಪರೀಕ್ಷೆ ಮುಂದೂಡಿಕೆ

ಪಿಟಿಐ
Published 6 ಏಪ್ರಿಲ್ 2022, 21:04 IST
Last Updated 6 ಏಪ್ರಿಲ್ 2022, 21:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜೆಇಇ–ಮೇನ್‌ನ ಮೊದಲ ಅವಧಿಯ ಪರೀಕ್ಷೆಯನ್ನು ಜೂನ್‌ಗೆ ಹಾಗೂ ಎರಡನೇ ಅವಧಿಯ ಪರೀಕ್ಷೆಯನ್ನು ಜುಲೈಗೆ ಮುಂದೂಡಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬುಧವಾರ ತಿಳಿಸಿದೆ.

ಮೊದಲ ಅವಧಿಯ ಪರೀಕ್ಷೆ ಜೂನ್‌ 20 ರಿಂದ 29ರ ವರೆಗೆ ಹಾಗೂ ಎರಡನೇ ಅವಧಿ ಪರೀಕ್ಷೆ ಜುಲೈ 21– 30ರವರೆಗೆ ನಡೆಯಲಿದೆ.

‘ಪರೀಕ್ಷೆಗಳ ದಿನಾಂಕ ಬದಲಿಸುವಂತೆ ಬಹಳಷ್ಟು ಜನ ಅಭ್ಯರ್ಥಿಗಳು ಮನವಿ ಸಲ್ಲಿಸಿದ್ದರು. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಎನ್‌ಟಿಎ ತಿಳಿಸಿದೆ.

ADVERTISEMENT

ಈ ಮುಂಚೆ, ಮೊದಲ ಅವಧಿಯ ಪರೀಕ್ಷೆ ಏಪ್ರಿಲ್‌ 21ರಿಂದ 29 ಹಾಗೂ ಮೇ 1ರಂದು ನಿಗದಿಯಾಗಿತ್ತು. ಎರಡನೇ ಅವಧಿ ಪರೀಕ್ಷೆ ಮೇ 24ರಿಂದ 29ರ ವರೆಗೆ ನಿಗದಿಯಾಗಿತ್ತು.

ಜುಲೈ 17ಕ್ಕೆ ‘ನೀಟ್‌’

ರಾಷ್ಟ್ರೀಯ ಪ್ರವೇಶ ಹಾಗೂ ಅರ್ಹತಾ ಪರೀಕ್ಷೆ (ನೀಟ್‌) ಜುಲೈ 17ರಂದು ನಡೆಯಲಿದ್ದು, ನೋಂದಣಿ ಪ್ರಕ್ರಿಯೆಗೆ ಬುಧವಾರ ಚಾಲನೆ ನೀಡಲಾಗಿದೆ.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮೇ 6 ಕೊನೆಯ ದಿನವಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.