ADVERTISEMENT

ಜೆಇಇ ಮೇನ್‌ ಸೆಷನ್–2 ಪರೀಕ್ಷೆ ಜುಲೈ 25ಕ್ಕೆ ಮುಂದೂಡಿಕೆ

ಜುಲೈ 25ರಿಂದ ಪರೀಕ್ಷೆ ಆರಂಭ–ಎನ್‌ಟಿಎ

ಪಿಟಿಐ
Published 20 ಜುಲೈ 2022, 14:22 IST
Last Updated 20 ಜುಲೈ 2022, 14:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಗುರುವಾರದಿಂದ ಆರಂಭವಾಗಬೇಕಿದ್ದ ಜೆಇಇ ಮೇನ್‌–ಸೆಷನ್ 2ಪರೀಕ್ಷೆಯನ್ನು ಮುಂದೂಡಲಾಗಿದ್ದು, ಇದೇ 25ರಿಂದ ಆರಂಭವಾಗಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ಬುಧವಾರ ತಿಳಿಸಿದೆ. ಪರೀಕ್ಷೆ ಮುಂದೂಡಲು ಕಾರಣ ಏನೆಂದು ತಿಳಿಸಿಲ್ಲ.

ಭಾರತದ ಹೊರಗಿನ 17 ನಗರಗಳು ಸೇರಿದಂತೆ ಸುಮಾರು 500 ನಗರಗಳಲ್ಲಿ 6.29 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಗುರುವಾರದಿಂದ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಈ ಮೊದಲಿನ ವೇಳಾಪಟ್ಟಿಯಂತೆಜುಲೈ 21ರಿಂದ 30ರ ವರೆಗೆ ಪರೀಕ್ಷಾ ನಡೆಯಬೇಕಿತ್ತು.

ADVERTISEMENT

ಜೆಇಇ ಮೇನ್‌ ಸೆಷನ್‌ 1 ಪರೀಕ್ಷೆ ಜೂನ್‌ 23ರಿಂದ 29ರವರೆಗೆ ನಡೆದಿತ್ತು ಹಾಗೂ ಜುಲೈ 12ರಂದು ಫಲಿತಾಂಶ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.