(ಸಾಂದರ್ಭಿಕ ಚಿತ್ರ)
ಉತ್ತರ ಪ್ರದೇಶದ ನಿವೃತ್ತ ರೈಲ್ವೆ ಉದ್ಯೋಗಿಯೊಬ್ಬರು ತಮ್ಮ 35 ವರ್ಷದ ಸಹಜೀವನ ಸಂಗಾತಿಯನ್ನು (Live In Partner) ಕೊಲೆ ಮಾಡಿ, ಆಕೆಯ ದೇಹವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ತುಂಬಿಸಿ ಸುಟ್ಟುಹಾಕಿದ್ದಾನೆ. ಮಾತ್ರವಲ್ಲ, ಸಾಕ್ಷ್ಯ ನಾಶಮಾಡಲು ಚಿತಾಭಸ್ಮವನ್ನು ನದಿಗೆ ಎಸೆದಿದ್ದಾನೆ ಎಂದು ವರದಿಯಾಗಿದೆ.
ಝಾನ್ಸಿ: ಉತ್ತರ ಪ್ರದೇಶದ ನಿವೃತ್ತ ರೈಲ್ವೆ ಉದ್ಯೋಗಿಯೊಬ್ಬರು ತಮ್ಮ 35 ವರ್ಷದ ಸಹಜೀವನ ಸಂಗಾತಿಯನ್ನು (Live In Partner) ಕೊಲೆ ಮಾಡಿ, ಆಕೆಯ ದೇಹವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ತುಂಬಿಸಿ ಸುಟ್ಟುಹಾಕಿದ್ದಾನೆ. ಮಾತ್ರವಲ್ಲ, ಸಾಕ್ಷ್ಯ ನಾಶಮಾಡಲು ಚಿತಾಭಸ್ಮವನ್ನು ನದಿಗೆ ಎಸೆದಿದ್ದಾನೆ ಎಂದು ವರದಿಯಾಗಿದೆ.
ಆರೋಪಿ ರಾಮ್ ಸಿಂಗ್ ಪರಿಹಾರ್ ಎಂಬಾತ ಇಬ್ಬರು ಪತ್ನಿಯರೊಂದಿಗೆ ವಾಸಿಸುತ್ತಿದ್ದಾನೆ. ಮೊದಲ ಪತ್ನಿ ಸಿಪ್ರಿ ಬಜಾರ್ ಪ್ರದೇಶದಲ್ಲಿದ್ದರೆ, ಎರಡನೇ ಪತ್ನಿ ಅದೇ ನಗರದ ಸಿಟಿ ಕೊಟ್ವಾಲಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಇದರ ಹೊರತಾಗಿಯೂ ಆರೋಪಿ ರಾಮ್ ಸಿಂಗ್ ಇನ್ನೊಂದು ಮಹಿಳೆ ಜೊತೆ ಸಹಜೀವನ ಸಂಗಾತಿ ಹೊಂದಿದ್ದನು. ಸದ್ಯ, ಸಹಜೀವನ ಸಂಗಾತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ವಿಚಾರ ಬಯಲಿಗೆ ಬಂದಿದೆ.
ಪರಿಹಾರ್, ಪ್ರೀತಿ ಎಂಬ ಮಹಿಳೆಯನ್ನು ಕೊಂದು ಆಕೆಯ ದೇಹವನ್ನು ಟಾರ್ಪಲ್‌ನಲ್ಲಿ ಸುತ್ತಿ ಲೋಹದ ಟ್ರಂಕ್‌ಗೆ ತುಂಬಿಸಿದ್ದ. ನಂತರ ಅದನ್ನು ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾನೆ. ಸಾಕ್ಷ್ಯನಾಶ ಮಾಡಲು, ಚಿತಾಭಸ್ಮವನ್ನು ಚೀಲಗಳಲ್ಲಿ ಸಂಗ್ರಹಿಸಿ ಹತ್ತಿರದ ನದಿಗೆ ಎಸೆದಿದ್ದಾನೆ.
ಟ್ರಂಕ್‌ನಲ್ಲಿ ಉಳಿದ ಅವಶೇಷಗಳನ್ನು ತನ್ನ ಎರಡನೇ ಹೆಂಡತಿ ಗೀತಾಳ ಮನೆಗೆ ಕಳುಹಿಸಲು ಯೋಜನೆ ಹಾಕಿದ್ದ ಎನ್ನಲಾಗಿದೆ. ನಂತರ ಶನಿವಾರ ರಾತ್ರಿ ಪರಿಹಾರ್ ತನ್ನ ಮಗ ನಿತಿನ್‌ಗೆ ಕರೆ ಮಾಡಿ, ಭಾರವಾದ ಟ್ರಂಕ್ ಎರಡನೇ ಹೆಂಡತಿ ಗೀತಾಳ ಮನೆಗೆ ಸಾಗಿಸಲು ವಾಹನ ಬುಕ್ ಮಾಡಿಕೊಂಡಿದ್ದ. ಆದರೆ ಆತನ ಕೃತ್ಯ ಬಯಲಾಗಿದೆ.
ಈ ಘಟನೆ ಬೆಳಕಿಗೆ ಬರುವಂತೆ ಮಾಡಿದ್ದು ಲೋಡರ್ ಚಾಲಕ ಜಯಸಿಂಗ್ ಪಾಲ್ ಅವರ ಜಾಗರೂಕತೆ. ಪರಿಹಾರ್ ಲೋಡರ್ ಚಾಲಕನಿಗೆ ₹400 ಕೊಟ್ಟು ವಾಹನ ಬುಕ್ ಮಾಡಿಕೊಂಡಿದ್ದ. ಟ್ರಂಕ್ ನೋಡಿದ ಜಯಸಿಂಗ್ ಅವರಿಗೆ ಅನುಮಾನ ವ್ಯಕ್ತವಾಗಿದೆ. ಆರಂಭದಲ್ಲಿ ಟ್ರಂಕ್ ಸಾಗಿಸಲು ನಿರಾಕರಿಸಿದರೂ, ಕೊನೆಗೆ ಒಪ್ಪಿಕೊಂಡಿದ್ದರು. ಆದರೆ, ಅದನ್ನು ಗೀತಾ ಅವರ ಮನೆಗೆ ಸಾಗಿಸಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ವಾಹನ ಚಾಲಕ, 'ಏನೋ ಎಡವಟ್ಟಾಗಿರಬಹುದುದ ಎಂಬ ಅನುಮಾನ ಮೂಡಿತು. ಹಾಗಾಗಿ, ಗೀತಾ ಅವರ ಮನೆ ತಲುಪಿದ ನಂತರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದೆ' ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ನಗರ ಪೊಲೀಸ್ ವರಿಷ್ಠಾಧಿಕಾರಿ ಪ್ರೀತಿ ಸಿಂಗ್ ಮಾಹಿತಿ ನೀಡಿದ್ದು. ‘ಲೋಡರ್ ಚಾಲಕ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದಾಗ, ಮಾನವನ ಅಸ್ಥಿಪಂಜರದ ಅವಶೇಷಗಳು ಮತ್ತು ಸುಟ್ಟ ವಸ್ತುಗಳು ಕಂಡುಬಂದಿವೆ. ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ, ಅವಶೇಷಗಳನ್ನು ಸಂಗ್ರಹಿಸಿದ್ದಾರೆ’.
‘ಆರೋಪಿಯ ಎರಡನೇ ಪತ್ನಿ ಗೀತಾ ಅವರು ಪರಿಹಾರ್ ಜೊತೆ ವಾಸಿಸುತ್ತಿದ್ದ ಮಹಿಳೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಳು ಎಂದು ನಮಗೆ ತಿಳಿಸಿದ್ದಾರೆ. ಅಪರಾಧ ಸ್ಥಳದಲ್ಲಿ ಸಿಕ್ಕ ಸಾಕ್ಷಿ ಆಧಾರಗಳನ್ನು ನಾವು ವಶಪಡಿಸಿಕೊಂಡಿದ್ದೇವೆ. ಹಾಗೂ ಪರಿಹಾರ್ ಸಿಂಗ್ ಅವರ ಮಗ ಸೇರಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದೇವೆ. ಪ್ರಮುಖ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.