ADVERTISEMENT

ಜಾರ್ಖಂಡ್‌ ಚುನಾವಣೆ | ತ್ಯಾಗಕ್ಕೂ ಸಿದ್ಧರಿಲ್ಲ, ದ್ರೋಹವನ್ನೂ ಬಗೆಯಲ್ಲ: RJD

ಪಿಟಿಐ
Published 20 ಅಕ್ಟೋಬರ್ 2024, 15:16 IST
Last Updated 20 ಅಕ್ಟೋಬರ್ 2024, 15:16 IST
<div class="paragraphs"><p>ಆರ್‌ಜೆಡಿ</p></div>

ಆರ್‌ಜೆಡಿ

   

ನವದೆಹಲಿ: ಜಾರ್ಖಂಡ್‌ ವಿಧಾನಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ಮಧ್ಯೆ ಸೀಟು ಹಂಚಿಕೆ ವಿಚಾರವಾಗಿ ನಡೆದ ಮಾತುಕತೆಯು ಫಲಗೂಡಲಿಲ್ಲ. ಆರ್‌ಜೆಡಿ ಹಾಗೂ ಸಿಪಿಐ (ಎಂಎಲ್‌)ಎಲ್‌ ಪಕ್ಷಗಳಿಗೆ ಕ್ರಮವಾಗಿ 3–4 ಸೀಟು ನೀಡುವುದನ್ನು ಆ ಪಕ್ಷಗಳು ವಿರೋಧಿಸಿವೆ.

‘12ಕ್ಕಿಂತ ಕಡಿಮೆ ಸೀಟುಗಳನ್ನು ನೀಡಿದರೆ, ಅದು ನಮಗೆ ಒಪ್ಪಿಗೆ ಇಲ್ಲ’ ಎಂದು ಆರ್‌ಜೆಡಿ ಪಟ್ಟುಹಿಡಿದಿದ್ದರೆ, ‘ಐದಕ್ಕೂ ಕಡಿಮೆ ಸೀಟುಗಳಿಗೆ ನಮಗೂ ಒಪ್ಪಿಗೆ ಇಲ್ಲ’ ಎಂದು ಸಿಪಿಐ (ಎಂಎಲ್‌)ಎಲ್‌ ಸ್ಪಷ್ಟಪಡಿಸಿದೆ. ಸೀಟು ಹಂಚಿಕೆ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಕ್ಕೆ ಕಾಂಗ್ರೆಸ್‌–ಜೆಎಂಎಂ ನಾಯಕರಿಗೆ ಈ ಎರಡೂ ಪಕ್ಷಗಳು ಸೋಮವಾರದವರೆಗೆ ಕಾಲಾವಕಾಶ ನೀಡಿವೆ.

ADVERTISEMENT

ಸೀಟು ಹಂಚಿಕೆ ಮಾತುಕತೆಯಲ್ಲಿ ತಮ್ಮ ಬೇಡಿಕೆ ಈಡೇರದಿದ್ದರೆ, 18–20 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆರ್‌ಜೆಡಿ ತಯಾರಿ ನಡೆಸಿದೆ. ‘ಸೀಟು ಹಂಚಿಕೆ ವಿಚಾರವು ಏನೇ ಆಗಲಿ. ಆದರೆ, ‘ಇಂಡಿಯಾ’ ಮೈತ್ರಿ ಧರ್ಮಕ್ಕೆ ಯಾವುದೇ ಕಾರಣಕ್ಕೂ ದ್ರೋಹ ಬಗೆಯುವುದಿಲ್ಲ. ಉಳಿದ ಕ್ಷೇತ್ರಗಳಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪರ ಕೆಲಸ ಮಾಡುತ್ತೇವೆ’ ಎಂದು ಆರ್‌ಜೆಡಿ ಸ್ಪಷ್ಟಪಡಿಸಿದೆ.

‘ಶುಕ್ರವಾರದಂದು ನಡೆದ ಸಭೆಯು ಬಹಳ ಆಪ್ತವಾಗಿ ನಡೆಯಿತು. ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ಸಭೆಯಲ್ಲಿದ್ದರು. ಎಲ್ಲರೂ ಒಟ್ಟುಗೂಡಿ ಚುನಾವಣೆ ಎದುರಿಸುವ ಮಾತುಕತೆಗಳು ನಡೆದಿದ್ದವು. ಆದರೆ, ಶನಿವಾರ ನಡೆದ ಸಭೆಯಲ್ಲಿ ನಮಗೆ ಏಳು ಸೀಟುಗಳನ್ನು ನೀಡಲಾಗುವುದು ಎಂಬ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಅದೇ ದಿನ ಸಂಜೆ ನಡೆದ ಸಭೆಯು ಆಪ್ತವಾಗಿಯೂ ಇರಲಿಲ್ಲ ಮತ್ತು ನಮಗೆ 3–4 ಸೀಟುಗಳನ್ನು ನೀಡುವುದಾಗಿ ಹೇಳಿದರು’ ಎಂದು ಆರ್‌ಜೆಡಿ ಸಂಸದ ಮನೋಜ್‌ ಝಾ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.