ADVERTISEMENT

ಹುರಿಯತ್‌ ಕಾನ್ಫರೆನ್ಸ್‌ನ ಮಿರ್ವೈಜ್ ಫಾರೂಕ್ ಗೃಹಬಂಧನ 4 ವರ್ಷಗಳ ನಂತರ ಅಂತ್ಯ

ಪಿಟಿಐ
Published 22 ಸೆಪ್ಟೆಂಬರ್ 2023, 6:18 IST
Last Updated 22 ಸೆಪ್ಟೆಂಬರ್ 2023, 6:18 IST
<div class="paragraphs"><p>ಮಿರ್ವೈಜ್‌ ಉಮರ್ ಫಾರೂಕ್</p></div>

ಮಿರ್ವೈಜ್‌ ಉಮರ್ ಫಾರೂಕ್

   

ಶ್ರೀನಗರ: ಹುರಿಯತ್ ಕಾನ್ಫರೆನ್ಸ್‌ನ ಅಧ್ಯಕ್ಷ ಮಿರ್ವೈಜ್‌ ಉಮರ್ ಫಾರೂಕ್ ಅವರನ್ನು ನಾಲ್ಕು ವರ್ಷಗಳ ನಂತರ ಗೃಹ ಬಂಧನದಿಂದ ಶುಕ್ರವಾರ ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಂವಿಧಾನದ 370ನೇ ವಿಧಿಯಡಿ ಈ ಹಿಂದಿನ ಜಮ್ಮು–ಕಾಶ್ಮೀರ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 2019ರಲ್ಲಿ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಗೃಹ ಬಂಧನದಲ್ಲಿರಿಸಿದ್ದರು.

ADVERTISEMENT

ಗೃಹಬಂಧನದಿಂದ ಮುಕ್ತರಾದ ನಂತರ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ನಡೆಯಲಿರುವ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ನೊಹಾತಾ ಪ್ರದೇಶದ ಅಂಜುಮನ್ ಔಖಾಫ್‌ ಜಾಮಿಯಾ ಮಸೀದಿಯ ವ್ಯವಸ್ಥಾಪನಾ ಮಂಡಳಿಯ ಪ್ರಕಟಣೆ ತಿಳಿಸಿದೆ.

‘ಮಿರ್ವೈಜ್‌ ಅವರ ಮನೆಗೆ ಗುರುವಾರ ಸಂಜೆ ಭೇಟಿ ನೀಡಿದ ಅಧಿಕಾರಿಗಳು ಗೃಹಬಂಧನದಿಂದ ಮುಕ್ತಗೊಳಿಸುತ್ತಿರುವ ವಿಷಯ ತಿಳಿಸಿದರು. ಜಾಮಿಯಾ ಮಸೀದಿಯಲ್ಲಿ ಶುಕ್ರವಾರ ನಡೆಯಲಿರುವ ಪಾರ್ಥನೆಯಲ್ಲಿ ಪಾಲ್ಗೊಳ್ಳಲು ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ಮಸೀದಿ ಪ್ರಕಟಣೆಯಲ್ಲಿ ಹೇಳಲಾಗಿದೆ.

ತಮ್ಮ ಗೃಹ ಬಂಧನವನ್ನು ಪ್ರಶ್ನಿಸಿ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್‌ನ ಅಧ್ಯಕ್ಷ ಮಿರ್ವೈಜ್‌ ಅವರು ಹೈಕೋರ್ಟ್ ಮೊರೆ ಹೋದ ನಂತರ ಅವರ ಬಿಡುಗಡೆಯ ಸುದ್ದಿ ಹೊರಬಿದ್ದಿದೆ.

ಮಿರ್ವೈಜ್‌ ಅವರ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವಂತೆ ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಸೆ. 15ರಂದು ನ್ಯಾಯಾಲಯ ಕೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.