ADVERTISEMENT

ಜಾರ್ಖಂಡ್ ಸ್ಪೀಕರ್ ಆಗಿ ಜೆಎಂಎಂ ಶಾಸಕ ರವೀಂದ್ರನಾಥ ಮಹತೋ ಅವಿರೋಧ ಆಯ್ಕೆ

ಪಿಟಿಐ
Published 10 ಡಿಸೆಂಬರ್ 2024, 7:33 IST
Last Updated 10 ಡಿಸೆಂಬರ್ 2024, 7:33 IST
<div class="paragraphs"><p>ಜಾರ್ಖಂಡ್ ಸಿ.ಎಂ ಹೇಮಂತ್ ಸೊರೇನ್ </p></div>

ಜಾರ್ಖಂಡ್ ಸಿ.ಎಂ ಹೇಮಂತ್ ಸೊರೇನ್

   

ರಾಂಚಿ: ಜಾರ್ಖಂಡ್ ವಿಧಾನಸಭೆಯ ಸ್ಪೀಕರ್ ಆಗಿ ಜೆಎಂಎಂ ಶಾಸಕ ರವೀಂದ್ರನಾಥ ಮಹತೋ ಅವರು ಅವಿರೋಧವಾಗಿ ಮಂಗಳವಾರ ಆಯ್ಕೆಯಾಗಿದ್ದಾರೆ.

ನಾಲಾ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರನಾಥ ಮಹತೋ ಅವರ ಹೆಸರನ್ನು ಆಡಳಿತ ಮೈತ್ರಿಕೂಟ ಹಾಗೂ ಮುಖ್ಯಮಂತ್ರಿ ಹೇಮಂತ್ ಸೊರೇನ್ ಶಿಫಾರಸು ಮಾಡಿದ್ದರು.

ADVERTISEMENT

ಹೇಮಂತ್ ಸೊರೇನ್ ಅವರು ಸ್ಪೀಕರ್ ಸ್ಥಾನಕ್ಕೆ ರವೀಂದ್ರನಾಥ ಮಹತೋ ಹೆಸರನ್ನು ಪ್ರಸ್ತಾಪಿಸಿದರು. ಜೆಎಂಎಂ ಶಾಸಕ ಮಥುರಾ ಪ್ರಸಾದ್ ಹಾಗೂ ಮೈತ್ರಿಕೂಟದ ಕೆಲ ಶಾಸಕರು ಈ ಪ್ರಸ್ತಾವಕ್ಕೆ ಅನುಮೋದನೆ ಸೂಚಿಸಿದರು. 

ರವೀಂದ್ರನಾಥ ಮಹತೋ ಅವರು ಸ್ಪೀಕರ್‌ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹಂಗಾಮಿ ಸ್ಪೀಕರ್‌ ಘೋಷಣೆ ಮಾಡಿದರು. ಹಿಂದಿನ ವಿಧಾನಸಭೆಯಲ್ಲೂ ಮಹತೋ ಸ್ಪೀಕರ್ ಆಗಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಮಹತೋ ಅವರು ಬಿಜೆಪಿ ಅಭ್ಯರ್ಥಿ ಮಾಧವ್ ಚಂದ್ರ ಅವರನ್ನು 10,483 ಮತಗಳ ಅಂತರದಿಂದ ಸೋಲಿಸಿದ್ದರು.

ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟ 56 ಸ್ಥಾನಗಳನ್ನು ಪಡೆಯುವ ಮೂಲಕ ಎರಡನೇ ಬಾರಿ ಅಧಿಕಾರಕ್ಕೆ ಬಂದಿದೆ. BJP ನೇತೃತ್ವದ ಎನ್‌ಡಿಎ 24 ಸ್ಥಾನಗಳನ್ನು ಪಡೆದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.