ADVERTISEMENT

ಕನ್ಹಯ್ಯಾ ವಿರುದ್ಧದ ದೇಶದ್ರೋಹ ಪ್ರಕರಣ: ಗಡುವು ಕೇಳಿದ ದೆಹಲಿ ಸರ್ಕಾರ

ಪಿಟಿಐ
Published 3 ಏಪ್ರಿಲ್ 2019, 20:17 IST
Last Updated 3 ಏಪ್ರಿಲ್ 2019, 20:17 IST
Patna: JNU Students Union former president Kanhaiya Kumar addresses a press conference ahead of Lok Sabha Election 2019, in Patna, Sunday, March 24, 2019. (PTI Photo) (PTI3_24_2019_000089A)
Patna: JNU Students Union former president Kanhaiya Kumar addresses a press conference ahead of Lok Sabha Election 2019, in Patna, Sunday, March 24, 2019. (PTI Photo) (PTI3_24_2019_000089A)   

ನವದೆಹಲಿ: ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾಕುಮಾರ್‌ಮತ್ತು ಇತರರನ್ನು ತನಿಖೆಗೆ ಒಳಪಡಿಸುವ ಸಂಬಂಧ ನಿರ್ಧಾರ ಕೈಗೊಳ್ಳಲು ತಿಂಗಳ ಸಮಯಾವಕಾಶಬೇಕು ಎಂದು ದೆಹಲಿ ಸರ್ಕಾರ ಬುಧವಾರ ನ್ಯಾಯಾಲಯಕ್ಕೆ ತಿಳಿಸಿದೆ.

ಈ ಸಂಬಂಧ ಸ್ಪಷ್ಟ ನಿರ್ಧಾರಕ್ಕೆ ಬರಲು ಎಷ್ಟು ಅವಧಿ ಬೇಕು ಎಂದು ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ದೀಪಕ್‌ ಶೆರಾವತ್‌ ದೆಹಲಿಯ ಎಎಪಿ ಸರ್ಕಾರಕ್ಕೆ ಪ್ರಶ್ನಿಸಿದ್ದರು.

2016ರ ಫೆಬ್ರುವರಿ 9ರಂದು ಜೆಎನ್‌ಯು ಆವರಣದಲ್ಲಿ ನಡೆದ ಮೆರವಣಿಯಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಲು ಕನ್ಹಯ್ಯಾ ಪ್ರೇರೇಪಿಸಿದ್ದರು ಎಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಜನವರಿ 14ರಂದು ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.