ADVERTISEMENT

ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಜೆಎನ್‌ಯು ಸೂಚನೆ

ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಬರಹ

ಪಿಟಿಐ
Published 2 ಡಿಸೆಂಬರ್ 2022, 14:44 IST
Last Updated 2 ಡಿಸೆಂಬರ್ 2022, 14:44 IST
ಜೆಎನ್‌ಯು ಗೋಡೆಗಳಲ್ಲಿ ಬರೆಯಲಾಗಿರುವ ಆಕ್ಷೇಪಾರ್ಹ ಬರಹಗಳು
ಜೆಎನ್‌ಯು ಗೋಡೆಗಳಲ್ಲಿ ಬರೆಯಲಾಗಿರುವ ಆಕ್ಷೇಪಾರ್ಹ ಬರಹಗಳು   

ನವದೆಹಲಿ:ಇಲ್ಲಿನ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಕ್ಯಾಂಪಸ್‌ ಆವರಣದಲ್ಲಿನ ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಬರಹಗಳನ್ನು ಬರೆದಿರುವುದು ಬೆಳಕಿಗೆ ಬಂದ ಬೆನ್ನಲ್ಲೇ, ತನ್ನ ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವಂತೆ ವಿವಿಯು ಸೂಚಿಸಿದೆ.

ಎಲ್ಲ ಶಾಲೆಗಳು ಹಾಗೂಕೇಂದ್ರಗಳು ಒಂದೇ ಪ್ರವೇಶ ಮತ್ತು ನಿರ್ಗಮನದ್ವಾರ ಹೊಂದಿರಬೇಕು ಎಂದೂಜೆಎನ್‌ಯು ಆಡಳಿತ ಸಲಹೆ ನೀಡಿದೆ.

ಸ್ಕೂಲ್‌ ಆಫ್‌ ಇಂಟರ್‌ನ್ಯಾಷನಲ್ ಸ್ಟಡೀಸ್‌– 2 ರ ಕಟ್ಟಡದ ಗೋಡೆಗಳಲ್ಲಿ ಬ್ರಾಹ್ಮಣ ಹಾಗೂ ಬನಿಯಾ ವಿರೋಧಿ ಬರಹಗಳನ್ನು ಬರೆಯಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಬ್ರಾಹ್ಮಣ ಮತ್ತು ಬನಿಯಾ ಸಮುದಾಯಕ್ಕೆ ಸೇರಿದವರು ಕ್ಯಾಂಪಸ್‌ ಬಿಟ್ಟು ತೊಲಗಿ ಎಂದು ಗೋಡೆ ಮೇಲಿನ ಬರಹಗಳಲ್ಲಿ ಎಚ್ಚರಿಸಲಾಗಿತ್ತು.

ADVERTISEMENT

ಈ ಸಂಬಂಧವಿವಿಯ ಆಡಳಿತವು,ಭದ್ರತಾ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಆರು ಅಂಶಗಳ ಸಲಹೆಯನ್ನು ನೀಡಲಾಗಿದೆ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡದಂತೆ ಪ್ರತಿ ಕೇಂದ್ರದ ಸೂಕ್ತ ಸ್ಥಳದಲ್ಲಿ ಸೂಚನಾ ಫಲಕ ಹಾಕುವಂತೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.