ADVERTISEMENT

‘ಪಠಾಣ್‌’ ವಿವಾದ: ಸೆನ್ಸಾರ್ ಮಂಡಳಿಗೆ ಕೆಲಸ ಮಾಡಲು ಬಿಡಿ– ಬಿಎಸ್‌ಪಿ ಸಂಸದ

ಲೋಕಸಭೆಯಲ್ಲಿ ಸದ್ದು ಮಾಡಿದ ಚಿತ್ರನಿಷೇಧ ವಿವಾದ

ಪಿಟಿಐ
Published 19 ಡಿಸೆಂಬರ್ 2022, 11:25 IST
Last Updated 19 ಡಿಸೆಂಬರ್ 2022, 11:25 IST
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ   

ನವದೆಹಲಿ: ‘ಪಠಾಣ್‌’ ಸಿನಿಮಾದಲ್ಲಿ ನಟ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ಅಭಿನಯದ ಹಾಡಿನ ಕುರಿತು ವಿವಾದವು ಸೋಮವಾರ ಲೋಕಸಭೆಯಲ್ಲಿ ಪ್ರತಿಧ್ವನಿಸಿತು.

ಈ ವೇಳೆ ಮಾತನಾಡಿದ ಬಿಎಸ್‌ಪಿ ಸಂಸದ ಕುನ್ವರ್ ದಾನಿಷ್ ಅಲಿ ಅವರು, ಚಿತ್ರವನ್ನು ನಿಷೇಧಿಸಲು ಆಗ್ರಹಿಸಿದವರ ವಿರುದ್ಧ ವಾಗ್ದಾಳಿ ನಡೆಸಿ, ‘ಚಿತ್ರದ ಕುರಿತು ತೀರ್ಮಾನ ಕೈಗೊಳ್ಳಲು ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿಗೆ (ಸಿಬಿಎಫ್‌ಸಿ) ಬಿಡಬೇಕು’ ಎಂದರು.

‘ಈ ಸಿನಿಮಾದ ಹಾಡೊಂದರಲ್ಲಿ ದೀಪಿಕಾ ಧರಿಸಿರುವ ಉಡುಗೆಯು ಕೇಸರಿ ಬಣ್ಣದ್ದಾಗಿದ್ದು, ಇದು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ’ ಎಂದು ಬಿಜೆಪಿಯ ಕೆಲ ಸಂಸದರು ದೂರಿ, ಚಿತ್ರ ನಿಷೇಧಕ್ಕೆ ಒತ್ತಾಯಿಸಿದ್ದಾರೆ. ಅಂತೆಯೇ ಮಧ್ಯಪ್ರದೇಶದ ಉಲೇಮಾ ಮಂಡಳಿಯು ಕೂಡಾ ಚಿತ್ರ ನಿಷೇಧಿಸುವಂತೆ ಕೋರಿದೆ. ಆದರೆ, ಸನಾತನ ಧರ್ಮವು ಯಾರೋ ಕೇಸರಿ ಬಣ್ಣದ ಉಡುಗೆ ಧರಿಸಿದ ಮಾತ್ರಕ್ಕೆ ಅಪಾಯಕ್ಕೆ ಒಳಗಾಗುವಷ್ಟು ದುರ್ಬಲವಾಗಿಲ್ಲ. ಅಂತೆಯೇ ಇಸ್ಲಾಂ ಧರ್ಮವು ಕೂಡಾ ದುರ್ಬಲವಾಗಿಲ್ಲ. ಚಿತ್ರವನ್ನು ನಿಷೇಧಿಸುವ ಕುರಿತು ತೀರ್ಮಾನ ಕೈಗೊಳ್ಳುವ ಕೆಲಸ ಸೆನ್ಸಾರ್ ಮಂಡಳಿಗೆ ಬಿಡಬೇಕು’ ಎಂದು ಅಲಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.