ADVERTISEMENT

ಅಮರನಾಥ ದೇಗುಲ ದರ್ಶನಕ್ಕೆ ಅರ್ಚಕರೊಬ್ಬರ 700 ಕಿ.ಮೀ. ಕಾಲ್ನಡಿಗೆ!

ಉತ್ತರಪ್ರದೇಶದ ಅರ್ಚಕರೊಬ್ಬರು ಕಾಲ್ನಡಿಗೆ ಮೂಲಕ 700 ಕಿ.ಮೀ ಕ್ರಮಿಸಿ ದಕ್ಷಿಣ ಕಾಶ್ಮೀರದ ಅಮರನಾಥ ಗುಹಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಿಟಿಐ
Published 18 ಜುಲೈ 2023, 16:10 IST
Last Updated 18 ಜುಲೈ 2023, 16:10 IST
ಅಮರನಾಥ ದೇಗುಲ –ಪಿಟಿಐ ಚಿತ್ರ
ಅಮರನಾಥ ದೇಗುಲ –ಪಿಟಿಐ ಚಿತ್ರ   

ಪುಲ್ವಾಮಾ (ಜಮ್ಮು ಮತ್ತು ಕಾಶ್ಮೀರ): ಉತ್ತರಪ್ರದೇಶದ ಅರ್ಚಕರೊಬ್ಬರು ಕಾಲ್ನಡಿಗೆ ಮೂಲಕ 700 ಕಿ.ಮೀ ಕ್ರಮಿಸಿ ದಕ್ಷಿಣ ಕಾಶ್ಮೀರದ ಅಮರನಾಥ ಗುಹಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಹರಾನ್‌ಪುರ ಜಿಲ್ಲೆಯ ಬಧೂ ಗ್ರಾಮದ ರಾಹುಲ್‌ ಶರ್ಮಾ ಅವರು ಮೇ 30 ರಂದು ಕಾಲ್ನಡಿಗೆ ಆರಂಭಿಸಿದ್ದು, ಜುಲೈ 11ರಂದು ಅಮರನಾಥ ತಲುಪಿದ್ದಾರೆ ಎಂದಿವೆ.

‘ಅಮರನಾಥ ಯಾತ್ರೆ ಮುಗಿಸಿ ಮನೆಗೆ ಮರಳಿದ ಬಳಿಕ ಉತ್ತರಾಖಂಡದ ಕೇದಾರನಾಥಕ್ಕೂ ಯಾತ್ರೆ ತೆರಳುವುದಾಗಿ ರಾಹುಲ್‌ ಅವರು ತಿಳಿಸಿದ್ದಾರೆ. ಅಮರನಾಥಕ್ಕೆ ಭೇಟಿ ನೀಡುವುದಕ್ಕೆ ಮುನ್ನ ಜಮ್ಮುವಿನ ವೈಷ್ಣೋದೇವಿ ದೇವಾಲಯಕ್ಕೂ ಭೇಟಿ ನೀಡಿರುವುದಾಗಿ ಅವರು ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.