ADVERTISEMENT

ನ್ಯಾಯ ಸಿಗಲು 8 ವರ್ಷ ಬೇಕಾಯಿತು: ನಿರ್ಭಯಾ ತಾಯಿ ಅಳಲು

ದೇಶವನ್ನೇ ಬೆಚ್ಚಿ ಬೀಳಿಸಿದ ನಿರ್ಭಯಾ ಪ್ರಕರಣಕ್ಕೆ ಎಂಟು ವರ್ಷ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2020, 4:48 IST
Last Updated 16 ಡಿಸೆಂಬರ್ 2020, 4:48 IST
ನಿರ್ಭಯಾ ತಾಯಿ ಆಶಾ ದೇವಿ
ನಿರ್ಭಯಾ ತಾಯಿ ಆಶಾ ದೇವಿ   

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ನಿರ್ಭಯಾ ಮೇಲಿನ ಅತ್ಯಾಚಾರವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಕ್ರೂರ ಕೃತ್ಯವನ್ನು ನೆನಪಿಸಿಕೊಂಡಿರುವ ತಾಯಿ, ಕಾನೂನು ವ್ಯವಸ್ಥೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಅಲ್ಲದೆ ನ್ಯಾಯ ಸಿಗಲು ಎಂಟು ವರ್ಷ ಕಾಯಬೇಕಾಯಿತು ಎಂದು ಅಳಲು ತೋಡಿಕೊಂಡರು.

ನ್ಯಾಯ ಸಿಗಲು ಯಾಕೆ ಇಷ್ಟು ಸಮಯ ಬೇಕಾಯಿತು ಎಂಬುದರ ಬಗ್ಗೆ ಸರ್ಕಾರ ಹಾಗೂ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು. ಹಾಗೆಯೇ ತುರ್ತಾಗಿ ನ್ಯಾಯ ದೊರಕಿಸಿಕೊಡಲು ಕಾನೂನುಗಳನ್ನು ಪುನರ್ ವಿಮರ್ಶೆ ಮಾಡಬೇಕು ಎಂದು ನಿರ್ಭಯಾ ತಾಯಿ ಆಶಾ ದೇವಿ ಮನವಿ ಮಾಡಿದರು.

ನನ್ನ ಮಗಳಿಗೆ ನ್ಯಾಯ ದೊರಕಿದೆ. ಅದರರ್ಥ ನಾನು ಮೌನವಾಗಿ ಕುಳಿತುಕೊಳ್ಳುತ್ತೇನೆ ಎಂದಲ್ಲ. ಎಲ್ಲ ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ನಾನು ಹೋರಾಟ ಮುಂದುವರಿಸುತ್ತೇನೆ. ಅತ್ಯಾಚಾರದ ವಿರುದ್ಧ ಎಲ್ಲರು ಧ್ವನಿ ಎತ್ತಬೇಕು. ದೇಶದಲ್ಲಿ ಇಂತಹ ಸ್ಥಿತಿ ಮರುಕಳಿಸಬಾರದು ಎಂದವರು ಮನವಿ ಮಾಡಿದರು.

ADVERTISEMENT

2012ರ ಡಿಸೆಂಬರ್ 16ರ ರಾತ್ರಿ ದೆಹಲಿಯ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಕ್ರೂರವಾಗಿ ಅತ್ಯಾಚಾರ ಎಸಗಲಾಗಿತ್ತು. ಬಳಿಕ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆಯ ಬಳಿಕ ತಪ್ಪಿತಸ್ಥರನ್ನು ಗಲ್ಲಿಗೇರಿಸಲಾಗಿತ್ತು.

ಇದೀಗ ನಿರ್ಭಯಾ ಪ್ರಕರಣಕ್ಕೆ ಎಂಟು ವರ್ಷಗಳೇ ಸಂದಿವೆ. ಅಲ್ಲದೆ ಅತ್ಯಾಚಾರದಂತಹ ಪ್ರಕರಣಗಳನ್ನು ನ್ಯಾಯಾಲಯಗಳು ತುರ್ತಾಗಿ ವಿಚಾರಣೆ ನಡೆಸಿ ಕಠಿಣ ಶಿಕ್ಷೆಯನ್ನು ನೀಡಲು ಬಲವಾದ ಬೇಡಿಕೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.