ADVERTISEMENT

ಇನ್‌ಸ್ಟಾಗ್ರಾಂನಲ್ಲಿ ಬಾಲಕಿಯರ ಅವಹೇಳನ: ತನಿಖೆ

ಇನ್‌ಸ್ಟಾಗ್ರಾಂ,ನಲ್ಲಿ ‘ಬಾಯ್ಸ್‌ ಲಾಕರ್‌ ರೂಂ’ ಗ್ರೂಪ್‌ನಿಂದ ಅಶ್ಲೀಲ ಚಿತ್ರ, ಚಾಟ್‌

ಪಿಟಿಐ
Published 5 ಮೇ 2020, 18:31 IST
Last Updated 5 ಮೇ 2020, 18:31 IST
   

ನವದೆಹಲಿ: ಇನ್‌ಸ್ಟಾಗ್ರಾಂನ ಗ್ರೂಪ್‌ವೊಂದರಲ್ಲಿ ಬಾಲಕಿಯರ ಕುರಿತು ಅಶ್ಲೀಲ ಚಾಟ್‌, ಚಿತ್ರಗಳನ್ನು ಹಂಚಿಕೊಂಡಿರುವ ಆರೋಪದ ಮೇಲೆ ದೆಹಲಿ ಪೊಲೀಸರು ಬಾಲಕನೊಬ್ಬನನ್ನು ವಶಕ್ಕೆ ಪಡೆದು, ಮಂಗಳವಾರ ವಿಚಾರಣೆಗೆ ಒಳಪಡಿಸಿದ್ದಾರೆ.

‘ಬಾಯ್ಸ್‌ ಲಾಕರ್‌ ರೂಂ’ ಎಂಬ ಹೆಸರಿನ ಗ್ರೂಪ್‌ನಲ್ಲಿ 100ಕ್ಕೂ ಅಧಿಕ ಸದಸ್ಯರಿದ್ದು, ಬಾಲಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಗ್ರೂಪ್‌ನ ಕೆಲವು ಸದಸ್ಯರು ಬಾಲಕಿಯರಿಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುವ ಬಗ್ಗೆಯೂ ಗ್ರೂಪ್‌ನ ಸದಸ್ಯರು ಚರ್ಚೆ ನಡೆಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ದೆಹಲಿ ಮಹಿಳಾ ಆಯೋಗ ನೀಡಿದ ದೂರಿನನ್ವಯ, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗ್ರೂಪ್‌ನಲ್ಲಿ ನಡೆಸಿದ ಚಾಟ್‌ನ ಸ್ಕ್ರೀನ್‌ಶಾಟ್‌ ಅನ್ನು ಸದಸ್ಯರೊಬ್ಬರು ಬೇರೆ ವ್ಯಕ್ತಿಗೆ ಕಳಿಸಿದಾಗ, ಇದು ಬೆಳಕಿಗೆ ಬಂದಿದೆ. ಅಲ್ಲದೇ, ಈ ಚಾಟ್‌ನ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.