ಕೊಯಮತ್ತೂರು: ಮಕ್ಕಳ್ ನೀಧಿ ಮಯ್ಯಂ (ಎಂಎನ್ಎಂ) ಪಕ್ಷದ ಮುಖ್ಯಸ್ಥ ಹಾಗೂ ನಟ ಕಮಲಹಾಸನ್ ಅವರು ತಮ್ಮ ಪಕ್ಷದ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾರೆ.
ಗೃಹಿಣಿಯರಿಗೆ ತಿಂಗಳಿಗೆ ₹3,000 ಸಹಾಯಧನ ನೀಡುವ ಭರವಸೆ ನೀಡಿದ್ದಾರೆ.
ಎಐಎಡಿಎಂಕೆ ಹಾಗೂ ಡಿಎಂಕೆ ಪಕ್ಷಗಳು ಮಹಿಳೆಯರಿಗೆ ತಲಾ ₹1,000 ಹಾಗೂ ₹1,500 ಸಹಾಯಧನ ನೀಡುವ ಬಗ್ಗೆ ತಮ್ಮ ಪ್ರಣಾಳಿಕೆಯಲ್ಲಿ ಇತ್ತೀಚೆಗೆ ಘೋಷಿಸಿದ್ದವು. ಇದರ ಬೆನ್ನಲ್ಲೇ ಬಿಡುಗಡೆಯಾಗಿರುವ ಕಮಲ್ ಪಕ್ಷದ ಪ್ರಣಾಳಿಕೆಯು ಸಹಾಯಧನವನ್ನು ಮೂರು ಸಾವಿರ ರೂಪಾಯಿಗೆ ಏರಿಸಿದೆ. ಆದರೆ, ಗೃಹಿಣಿಯರಿಗೆ ನೀಡುವ ಈ ಸಹಾಯಧನವನ್ನು ‘ಮೌಲ್ಯಯುತ ಹಕ್ಕಿನ ನೆರವು’ ಎಂದು ಕರೆದಿರುವ ಕಮಲ್, ಇದು ಉಚಿತ ಕೊಡುಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.