ADVERTISEMENT

ತಮಿಳುನಾಡು ವಿಧಾನಸಭಾ ಚುನಾವಣೆ: 154 ಕ್ಷೇತ್ರಗಳಲ್ಲಿ ಕಮಲಹಾಸನ್‌ ಪಕ್ಷ ಸ್ಪರ್ಧೆ

ಎಐಎಸ್ಎಂಕೆ ಮತ್ತು ಐಜೆಕೆ ಪಕ್ಷಗಳೊಂದಿಗೆ ಸೀಟು ಹಂಚಿಕೆ

ಪಿಟಿಐ
Published 9 ಮಾರ್ಚ್ 2021, 8:21 IST
Last Updated 9 ಮಾರ್ಚ್ 2021, 8:21 IST
ಕಮಲ್‌ ಹಾಸನ್
ಕಮಲ್‌ ಹಾಸನ್   

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ, ರಾಜಕಾರಣಿ ಕಮಲ್‌ ಹಾಸನ್‌ ನೇತೃತ್ವದ ಮಕ್ಕಳ್‌ ನೀಧಿ ಮಯಂ ಪಕ್ಷ (ಎಂಎನ್‌ಎಂ) 154 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಉಳಿದ 80 ಕ್ಷೇತ್ರಗಳಲ್ಲಿ ತಲಾ 40 ಕ್ಷೇತ್ರಗಳನ್ನು ತನ್ನ ಮಿತ್ರಪಕ್ಷವಾದ ನಟ, ರಾಜಕಾರಣಿ ಶರತ್‌ ಕುಮಾರ್ ಅವರ ಅಖಿಲ ಭಾರತ ಸಮತುವಾ ಮಕ್ಕಳ್‌ಕಚ್ಚಿ (ಎಐಎಸ್‌ಎಂಕೆ) ಮತ್ತು ಭಾರತೀಯ ಜನನಾಯಕ ಕಚ್ಚಿ (ಐಜೆಕೆ) ಪಕ್ಷಗಳಿಗೆ ಬಿಟ್ಟುಕೊಟ್ಟಿದೆ.

ತಮಿಳುನಾಡಿನ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಮೂರೂ ಪಕ್ಷಗಳೂ ಬದ್ಧವಾಗಿರುವುದಾಗಿ ಈ ಪಕ್ಷಗಳ ಚುನಾವಣಾ ಒಪ್ಪಂದಲ್ಲಿ ಹೇಳಲಾಗಿದೆ.

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 6ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.