ಮುಂಬೈ: ಕೋಮು ದ್ವೇಷ ಹರಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ಅವರ ಸಹೋದರಿ ರಂಗೋಲಿ ಚಾಂಡೆಲ್ ಅವರಿಗೆ ಮುಂಬೈ ಪೊಲೀಸರು ಎರಡನೇ ಬಾರಿ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಲು ಬಾಂದ್ರಾ ಪೊಲೀಸರು ಅಕ್ಟೋಬರ್ 21ರಂದು ಮೊದಲ ಬಾರಿ ನೋಟಿಸ್ ಕಳುಹಿಸಿದ್ದರು. ಅದಕ್ಕೆ ಕಂಗನಾ ರನೌತ್ ಅವರ ಪರ ವಕೀಲರು ’ಕಂಗನಾ ಹಿಮಾಚಲ ಪ್ರದೇಶದಲ್ಲಿದ್ದು, ಅವರ ಸೋದರ ಸಂಬಂಧಿಯ ಮದುವೆ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ‘ ಎಂದು ಪೊಲೀಸರಿಗೆ ಉತ್ತರಿಸಿದ್ದರು.
ಈಗ ಎರಡನೇ ಬಾರಿ ಇಬ್ಬರಿಗೂ ಬಾಂದ್ರಾ ಪೊಲೀಸರು ನೋಟಿಸ್ ಕಳುಹಿಸಿ, ನವೆಂಬರ್ 10ರೊಳಗೆ ಪೊಲೀಸ್ ಠಾಣೆಗೆ ಖುದ್ದು ಹಾಜರಾಗಲು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.