ನವದೆಹಲಿ: ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್ ವರ್ಮಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಆಂತರಿಕ ತನಿಖಾ ವರದಿಗೆ ‘ಸಾಂವಿಧಾನಿಕ ಪ್ರಸ್ತುತತೆ ಇಲ್ಲ’ ಎಂದು ರಾಜ್ಯಸಭಾ ಸಂಸದ ಹಾಗೂ ವಕೀಲ ಕಪಿಲ್ ಸಿಬಲ್ ಶನಿವಾರ ಇಲ್ಲಿ ಹೇಳಿದರು.
ನ್ಯಾಯಾಧೀಶರ ವಿಚಾರಣಾ ಕಾಯ್ದೆಯಡಿ ನಡೆಯುವ ತನಿಖೆಗಷ್ಟೇ ಮಾನ್ಯತೆಯಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸಂವಿಧಾನದ 124ನೇ ವಿಧಿಯ ಪ್ರಕಾರ, ರಾಜ್ಯಸಭೆಯ 50 ಸದಸ್ಯರು ಅಥವಾ ಲೋಕಸಭೆಯ 100 ಸದಸ್ಯರು ನಿರ್ಣಯವನ್ನು ಮಂಡಿಸಲು ನೋಟಿಸ್ ನೀಡಿದರೆ (ದೋಷಾರೋಪಣೆಗಾಗಿ), ನಂತರ ನ್ಯಾಯಾಧೀಶರ ವಿಚಾರಣಾ ಕಾಯ್ದೆಯಡಿ ನ್ಯಾಯಮೂರ್ತಿಗಳ ವಿಚಾರಣಾ ಸಮಿತಿ ರಚಿಸಲಾಗುತ್ತದೆ. ಆದರೆ, ಅಂತಹ ಸಮಿತಿಯನ್ನು ರಚಿಸುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ’ ಎಂದು ಹಿರಿಯ ವಕೀಲರಾದ ಸಿಬಲ್ ಹೇಳಿದರು.
‘ಕಳೆದ ವರ್ಷ ಕೋಮುದ್ವೇಷದ ಹೇಳಿಕೆ ನೀಡಿರುವ ನ್ಯಾಯಮೂರ್ತಿ ಶೇಖರ್ ಯಾದವ್ ಅವರನ್ನು ಸರ್ಕಾರ ರಕ್ಷಿಸುತ್ತಿದೆ’ ಎಂದು ಅವರು ಇದೇ ಸಂದರ್ಭ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.