ADVERTISEMENT

ಶೀಘ್ರದಲ್ಲೇ ತಲೆ ಎತ್ತಲಿದೆ ಕಾರ್ಗಿಲ್‌ ಮ್ಯೂಸಿಯಂ

ಪಿಟಿಐ
Published 9 ಜುಲೈ 2019, 3:29 IST
Last Updated 9 ಜುಲೈ 2019, 3:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಮ್ಮು: 1999ರಲ್ಲಿ ‘ಆಪರೇಷನ್‌ ವಿಜಯ್‌’ಗೆ ಸಾಕ್ಷಿಯಾಗಿದ್ದ ಕಾರ್ಗಿಲ್‌ನಲ್ಲಿ ಶೀಘ್ರವೇ ವಸ್ತುಸಂಗ್ರಹಾಲಯ ತಲೆ ಎತ್ತಲಿದೆ. ಪಟ್ಟಣದ ಕೇಂದ್ರಭಾಗದಲ್ಲಿ ಇದಕ್ಕಾಗಿ ಜಾಗ ನೀಡುವುದಾಗಿ ಲಡಾಖ್‌ ಗಿರಿ ಅಭಿವೃದ್ಧಿ ಸ್ವಾಯತ್ತ ಮಂಡಳಿ (ಎಲ್‌ಎಎಚ್‌ಡಿಸಿ ) ಹೇಳಿದೆ.

‘ಪ್ರಾಚೀನ ಪತ್ರಾಗಾರ, ಪ್ರಾಕ್ತನಶಾಸ್ತ್ರ ಹಾಗೂ ವಸ್ತುಸಂಗ್ರಹಾಲಯ ಇಲಾಖೆಯ ವತಿಯಿಂದ ಶ್ರೀನಗರ ಮತ್ತು ಜಮ್ಮುವಿನ ವಿವಿಧೆಡೆ ಪ್ರಾದೇಶಿಕ ಮ್ಯೂಸಿಯಂಗಳನ್ನು ಸ್ಥಾಪಿಸಲಾಗುವುದು’ ಎಂದು ಇಲಾಖೆಯ ನಿರ್ದೇಶಕ ಮುನೀರ್‌ ಉಲ್‌ ಇಸ್ಲಾಂ ಹೇಳಿದರು.

‘ಕಾರ್ಗಿಲ್‌ ಮ್ಯೂಸಿಯಂ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲು ಅನುದಾನ ಮಂಜೂರು ಮಾಡುವಂತೆ ಸಂಸ್ಕೃತಿ ಇಲಾಖೆಯನ್ನು ಕೋರಲಾಗುವುದು’ ಎಂದು ಅವರು ತಿಳಿಸಿದರು.

ADVERTISEMENT

‘ಸಂಸ್ಕೃತಿ ಮತ್ತು ಪರಂಪರೆ ವಿಷಯದಲ್ಲಿ ಆಸಕ್ತಿ ಇರುವವರು ಪ್ರಾಚೀನ ಕಾಲದ ಕಲಾಕೃತಿಗಳು, ಪ್ರಾಚೀನ ವಸ್ತುಗಳು, ಲಡಾಖ್‌ನ ಕೃಷಿ ಜೀವನಶೈಲಿ ಬಿಂಬಿಸುವ ವಸ್ತುಗಳು ಹಾಗೂ ಪ್ರಾಚೀನ ಆಭರಣಗಳು, ಸಾಂಪ್ರದಾಯಿಕ ವಸ್ತುಗಳನ್ನುಮ್ಯೂಸಿಯಂಗೆ ತಂದು ಕೊಡಬಹುದು’ ಎಂದು ಅವರು ಹೇಳಿದ್ದಾರೆ.

‘ಪ್ರಾಚೀನ ಕಾಲದಿಂದಲೂ ಕಾರ್ಗಿಲ್‌ ಪಟ್ಟಣವು ಪೂರ್ವ ಚೀನಾ, ಟಿಬೆಟ್‌ ಮತ್ತು ಇತರ ದೇಶಗಳೊಂದಿಗೆ ಹೊಂದಿದ್ದ ವ್ಯಾಪಾರ ಸಂಬಂಧ ಬಿಂಬಿಸುವಂತಹ ವಸ್ತುಗಳು ಮ್ಯೂಸಿಯಂ ಅನ್ನು ಅಲಂಕರಿಸಲಿವೆ’ ಎಂದು ಇಸ್ಲಾಂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.