ADVERTISEMENT

ಗೋವಾದಲ್ಲಿ ಮಹಿಳೆ ಕೊಲೆ: ಕರ್ನಾಟಕ ಮೂಲದ ವ್ಯಕ್ತಿ ಬಂಧನ

ಪಿಟಿಐ
Published 16 ಮೇ 2022, 9:30 IST
Last Updated 16 ಮೇ 2022, 9:30 IST
   

ಪಣಜಿ: ಗೋವಾದಲ್ಲಿ ಮಹಿಳೆಯೊಬ್ಬರನ್ನು ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಆರೋಪದ ಮೇಲೆ ಕರ್ನಾಟಕ ಮೂಲದ ಹುಸೇನ್ ಖಾನ್ (40) ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಮೇ 6 ರಂದು ದಕ್ಷಿಣ ಗೋವಾದ ಸಾನ್ವೊರ್‌ದಿಮ್ ಗ್ರಾಮದ ಬಳಿ ನಿರ್ಜನ ಪ್ರದೇಶವೊಂದರಲ್ಲಿ ರೂಪಾ ಪಾರ್ಕರ್ ಎನ್ನುವ ಮಹಿಳೆಯ ಕೊಲೆ ನಡೆದಿತ್ತು.

ವೃತ್ತಿಯಲ್ಲಿ ಕ್ಯಾಬ್‌ ಚಾಲಕನಾದ ಹುಸೇನ್ ಖಾನ್ಅವರು ಬಸ್‌ಗೆ ಕಾಯುತ್ತಿದ್ದರೂಪಾ ಪಾರ್ಕರ್ ಅವರಿಗೆ ಡ್ರಾಪ್ ನೀಡುವ ನೆಪದಲ್ಲಿ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದೋಯ್ದು ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದ. ಬಳಿಕ ಅವರ ಬಳಿ ಇದ್ದ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದ.

ADVERTISEMENT

ಹುಸೇನ್ ಖಾನ್ ಚಿನ್ನಾಭರಣಗಳನ್ನು ಮಾರಾಟ ಮಾಡಿ ಸಾಲ ತೀರಿಸಿದ್ದ. ದ್ವಿಚಕ್ರ ವಾಹನವನ್ನೂ ಖರೀದಿಸಿದ್ದ ಎಂದು ದಕ್ಷಿಣ ಗೋವಾ ಎಸ್‌ಪಿ ಅಭಿಷೇಕ್ ದಾನಿಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.