ADVERTISEMENT

ಕಂಗನಾಗೆ ಕರ್ಣಿಸೇನಾ ಬೆಂಬಲ: ರಾವುತ್ ವಿರುದ್ಧ ಪ್ರತಿಭಟನೆ

ಸಂಜಯ್ ರಾವುತ್ ವಿರುದ್ದ ಕ್ರಮಕ್ಕಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಾಯ

ಪಿಟಿಐ
Published 8 ಸೆಪ್ಟೆಂಬರ್ 2020, 16:43 IST
Last Updated 8 ಸೆಪ್ಟೆಂಬರ್ 2020, 16:43 IST
ಕಂಗನಾ ರನೋಟ್
ಕಂಗನಾ ರನೋಟ್   

ಗೋರಖ್‌ಪುರ್ (ಉತ್ತರ ಪ್ರದೇಶ): ಬಾಲಿವುಡ್ ನಟಿ ಕಂಗನಾ ರನೋಟ್ ಅವರನ್ನು ಬೆಂಬಲಿಸಿ, ಕರ್ಣಿಸೇನಾ ಸಂಘಟನೆ ಮಂಗಳವಾರ ಶಿವಸೇನಾದ ಸಂಸದ ಮತ್ತು ಮುಖ್ಯವಕ್ತಾರ ಸಂಜಯ್ ರಾವುತ್ ಅವರ ವಿರುದ್ಧ ಪ್ರತಿಭಟನೆ ನಡೆಸಿದೆ.

ಗೋರಖ್‌ಪುರದ ಶಾಸ್ತ್ರಿಚೌಕದಲ್ಲಿ ಪ್ರತಿಭಟನೆ ನಡೆಸಿದ ಕರ್ಣಿಸೇನಾ ಸಂಘಟನೆ ಸಂಜಯ್ ರಾವುತ್ ಅವರ ಪ್ರತಿಕೃತಿಯನ್ನು ದಹಿಸಿತು. ‘ರಾವುತ್ ಅವರು ಕಂಗನಾ ವಿರುದ್ಧ ಬಳಸಿರುವ ಭಾಷೆ ಎಲ್ಲಾ ಮಹಿಳೆಯರಿಗೆ ಮಾಡಿರುವ ಅವಮಾನ. ರಾವುತ್ ಕ್ಷಮೆಯಾಚಿಸಬೇಕು’ಎಂದು ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದರು.

ಕರ್ಣಿಸೇನಾದ ಗೋರಖ್‌ಪುರ ಜಿಲ್ಲಾಧ್ಯಕ್ಷ ದೇವೇಂದ್ರ ಸಿಂಗ್ ಮಾತನಾಡಿ, ‘ರಜಪೂತರು, ಮಹಿಳೆಯರು ಅಗೌರವ ಮತ್ತು ಅವಮಾನಕ್ಕೊಳಗಾದಾಗ ಅವರಿಗೆ ಬೆಂಬಲವಾಗಿ ಸದಾ ನಿಲ್ಲುತ್ತಾರೆ. ಸಂಸದರಾಗಿ ಸಂಜಯ್ ರಾವುತ್ ಅವರು ಕಂಗನಾ ವಿರುದ್ಧ ಅಸಂಸದೀಯ ಭಾಷೆ ಬಳಸಿರುವುದು ನಾಚಿಕೆಗೇಡಿನ ಸಂಗತಿ. ಇದನ್ನು ನಾವು ಖಂಡಿಸುತ್ತೇವೆ’ ಎಂದರು.

ADVERTISEMENT

ರಾವುತ್ ವಿರುದ್ಧ ಕ್ರಮಕ್ಕೆ ಆಗ್ರಹ: ಸಂಜಯ್ ರಾವುತ್ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಸರ್ಕಾರ ಮತ್ತು ಶಿವಸೇನಾಕ್ಕೆ ಆಗ್ರಹಿಸುತ್ತೇವೆ. ಇಲ್ಲದಿದ್ದರೆ ಮಹಿಳೆಯರ ಗೌರವಕ್ಕಾಗಿ ಕರ್ಣಿಸೇನಾ ಬೀದಿಗೆ ಬಂದು ಹೋರಾಟ ಮಾಡಲಿದೆ’ ಎಂದೂ ಕರ್ಣಿಸೇನಾ ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.