ADVERTISEMENT

ಕಾರ್ತಿ ಚಿದಂಬರಂ ವಿದೇಶಕ್ಕೆ ತೆರಳಲು ಅನುಮತಿ ಕೋರಿದ್ದ ಅರ್ಜಿ ತಿರಸ್ಕಾರ

ಏಜೆನ್ಸೀಸ್
Published 1 ನವೆಂಬರ್ 2018, 7:29 IST
Last Updated 1 ನವೆಂಬರ್ 2018, 7:29 IST
ಕಾರ್ತಿ ಚಿದಂಬರಂ
ಕಾರ್ತಿ ಚಿದಂಬರಂ   

ನವದೆಹಲಿ: ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಅವರ ಮಗ ಕಾರ್ತಿ ಸಲ್ಲಿಸಿದ್ದ ತುರ್ತು ವಿಚಾರಣಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

ಕಾರ್ತಿಚಿದಂಬರಂ ಅವರ ವಕೀಲರು ತಮ್ಮ ಗ್ರಾಹಕನು ಇಟಲಿ, ಆಸ್ಟ್ರಿಯಾ ಮತ್ತು ಯುಕೆಗಳಿಗೆ ನವೆಂಬರ್ 3 ರಿಂದ ಪ್ರಯಾಣಿಸಲು ಯೋಜಿಸಿದ್ದು, ನ್ಯಾಯಾಲಯದ ಅನುಮತಿ ಬೇಕಾಗಿರುವುದಾಗಿ ಹೇಳಿದರು.

ನವೆಂಬರ್‌ 3ರಿಂದ ಇಟಲಿ, ಆಸ್ಟ್ರಿಯಾ ಹಾಗೂ ಬ್ರಿಟನ್‌ಗೆತೆರಳಲು ಅನುಮತಿ ನೀಡುವಂತೆ ಕೋರಿ ಕಾರ್ತಿ ಪರ ವಕೀಲರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ADVERTISEMENT

ಶುಕ್ರವಾರವೇ ವಿಚಾರಣೆನಡೆಸುವಂತೆ ಸಲ್ಲಿಸಿದ್ದ ತುರ್ತು ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯ್‌ ತಿರಸ್ಕರಿಸಿದ್ದಾರೆ. ಜತೆಗೆ, ಎಲ್ಲ ನ್ಯಾಯಾಧೀಶರು ಅಗತ್ಯಕ್ಕಿಂತ ಹೆಚ್ಚು ಕೆಲಸ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಕಾರ್ತಿವಿದೇಶಕ್ಕೆ ತೆರಳಬೇಕಾದರೆ ಉನ್ನತ ನ್ಯಾಯಾಲಯದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.