ADVERTISEMENT

Karuru Stampede | ಕರೂರು ಕಾಲ್ತುಳಿತ: ಸಿಬಿಐ ತನಿಖೆಗೆ ವಹಿಸಿದ ಸುಪ್ರೀಂ ಕೋರ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2025, 6:09 IST
Last Updated 13 ಅಕ್ಟೋಬರ್ 2025, 6:09 IST
<div class="paragraphs"><p>ಸುಪ್ರೀಂಕೋರ್ಟ್ ಹಾಗೂ ವಿಜಯ್</p></div>

ಸುಪ್ರೀಂಕೋರ್ಟ್ ಹಾಗೂ ವಿಜಯ್

   

– ಪಿಟಿಐ ಚಿತ್ರಗಳು

ನವದೆಹಲಿ: ತಮಿಳುನಾಡಿನ ಕರೂರು ಕಾಲ್ತುಳಿತ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ವಹಿಸಿದೆ.

ADVERTISEMENT

ಸೆಪ್ಟೆಂಬರ್ 27ರಂದು ನಟ ವಿಜಯ ನೇತೃತ್ವದ ತಮಿಳ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ರಾಜಕೀಯ ಸಮಾವೇಶದಲ್ಲಿ ನಡೆದ ಕಾಲ್ತುಳಿತದಿಂದಾಗಿ 41 ಮಂದಿ ಮೃತಪಟ್ಟಿದ್ದರು. ಈ ಸಂಬಂಧ ತನಿಖೆ ನಡೆಸಲು ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿ ಮದ್ರಾಸ್ ಹೈಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ವಿಜಯ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿಗಳಾದ ಜೆ.ಕೆ ಮಹೇಶ್ವರಿ ಹಾಗೂ ಎನ್‌.ವಿ ಅಂಜಾರಿಯಾ ಅವರಿದ್ದ ಸುಪ್ರೀಂ ಕೋರ್ಟ್‌ನ ಪೀಠ ಸೋಮವಾರ ತೀರ್ಪು ಪ್ರಕಟಿಸಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತಲ್ಲದೆ, ನಿವೃತ್ತ ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ತ್ರಿಸದಸ್ಯ ಪೀಠ ತನಿಖೆಯ ಮೇಲ್ವಿಚಾರಣೆ ನಡೆಸಲಿದೆ ಎಂದು ಹೇಳಿತು.

‘ವಸ್ತುಸ್ಥಿತಿ ಮನಗಂಡ ಬಳಿಕ, ವಿಷಯವು ಪ್ರಜೆಗಳ ಮೂಲಭೂತ ಹಕ್ಕಿಗೆ ಸಂಬಂಧಪಟ್ಟದ್ದಾಗಿದೆ. ‍ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವಂತೆ ನಿರ್ದೇಶಿಸಲಾಗಿದೆ. ಪಕ್ಷಗಾರರ ತಳಮಳ ಶಮನಪಡಡಿಸಲು, ಮೂರು ಮಂದಿಯ ಸಮಿತಿ ರಚಿಸುವ ಪ್ರಸ್ತಾಪ ಮಾಡುತ್ತಿದ್ದೇವೆ. ಸಮಿತಿಯ ನೇತೃತ್ವ ತೆಗೆದುಕೊಳ್ಳಲು ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರನ್ನು ವಿನಂತಿಸುತ್ತಿದ್ದೇವೆ’ ಎಂದು ಕೋರ್ಟ್ ಹೇಳಿದೆ.

ತಮಿಳುನಾಡು ಕೇಡರ್‌ನವರಾದರೂ, ತಮಿಳುನಾಡು ಮೂಲದವರಲ್ಲದ ಇಬ್ಬರು ಐಪಿಎಸ್ ಅಧಿಕಾರಿಗಳು ಸಮಿತಿಯ ಭಾಗವಾಗಲಿದ್ದಾರೆ. ಐಜಿಪಿ ದರ್ಜೆಗಿಂತ ಕೆಳಗಿನವರಲ್ಲದವರನ್ನು ರಸ್ತೋಗಿಯವರು ಆಯ್ಕೆ ಮಾಡಿಕೊಳ್ಳಬಹುದು ಎಂದು ಕೋರ್ಟ್ ಹೇಳಿದೆ.

ರಸ್ತೋಗಿಯವರ ನಿರ್ದೇಶನದಂತೆ ಸಮಿತಿ ತನ್ನದೇ ಆದ ಪ್ರಕ್ರಿಯೆಗಳನ್ನು ಆನುಸರಿಸಬಹುದು. ಸಿಬಿಐ ತನ್ನ ತನಿಖಾ ವರದಿಯನ್ನು ಪ್ರತಿ ತಿಂಗಳು ಸಮಿತಿಗೆ ಸಲ್ಲಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.

(ಬಾರ್ ಆ್ಯಂಡ್ ಬೆಂಚ್ ವರದಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.