ADVERTISEMENT

ಕಾಶ್ಮೀರ ವಿಷಯ: ಸ್ಥಿರತೆಗೆ ಪ್ರಬಲ ಸವಾಲು –ಸೌದಿ ಅರೇಬಿಯಾ ಸಚಿವ

ಪಿಟಿಐ
Published 22 ಸೆಪ್ಟೆಂಬರ್ 2023, 20:18 IST
Last Updated 22 ಸೆಪ್ಟೆಂಬರ್ 2023, 20:18 IST
<div class="paragraphs"><p>ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಫೈಸಲ್‌ ಬಿನ್‌ ಫರ್ಹಾನ್‌ ಅವರೊಂದಿಗೆ  ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ –ಪಿಟಿಐ ಚಿತ್ರ</p></div>

ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಫೈಸಲ್‌ ಬಿನ್‌ ಫರ್ಹಾನ್‌ ಅವರೊಂದಿಗೆ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ –ಪಿಟಿಐ ಚಿತ್ರ

   

ನವದೆಹಲಿ: ‘ಕಾಶ್ಮೀರ ವಿಷಯವು ಅಲ್ಲಿನ ವಲಯದಲ್ಲಿ ಭದ್ರತೆ ಮತ್ತು ಸ್ಥಿರತೆಗೆ ಪ್ರಬಲ ಸವಾಲಾಗಿದೆ’ ಎಂದು ಸೌದಿ ಅರೇಬಿಯಾದ ವಿದೇಶಾಂಗ ಸಚಿವ, ರಾಜ ಫೈಸಲ್ ಬಿನ್‌ ಫರ್ಹಾನ್‌ ಅಭಿಪ್ರಾಯಪಟ್ಟಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಸೆಪ್ಟೆಂಬರ್ 20ರಂದು ನಡೆದಿದ್ದ ಆರ್ಗನೈಸೇಷನ್ ಆಫ್‌ ಇಸ್ಲಾಮಿಕ್‌ ಕಾರ್ಪೊರೇಷನ್‌ನ (ಒಐಸಿ) ಉಪ ಸಮಿತಿ ಸಭೆಯಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಸೌದಿ ಮೂಲದ ನಿಯತಕಾಲಿಕ ಅರಬ್‌ ನ್ಯೂಸ್‌ ವರದಿ ಮಾಡಿದೆ.

ADVERTISEMENT

ಇಸ್ಲಾಮಿಕ್‌ ಜನರನ್ನು ಬೆಂಬಲಿಸುವುದು ಸೌದಿ ಅರೇಬಿಯಾದ ದೃಢವಾದ ನಂಬಿಕೆಯಾಗಿದ್ದು, ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಈ ತಿಕ್ಕಾಟದಲ್ಲಿ ಭಾಗಿಯಾಗಿರುವವರ ನಡುವೆ ಮಧ್ಯಸ್ಥಿಕೆ ವಹಿಸುವ ಸೌದಿಯ ಪ್ರಯತ್ನವು ಕುಗ್ಗಿಲ್ಲ ಎಂದು ಹೇಳಿದ್ದಾರೆ.

ಆದರೆ, ಕಾಶ್ಮೀರ ವಿಷಯದಲ್ಲಿ ಯಾವುದೇ ರಾಷ್ಟ್ರದ ಮಧ್ಯಸ್ಥಿಕೆಯನ್ನು ಭಾರತವು ಈಗಾಗಲೇ ಸಾರಾಸಗಟಾಗಿ ತಳ್ಳಿಹಾಕಿದೆ. ಇದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ ಎಂದು ಭಾರತ ಪ್ರತಿಪಾದಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.