ADVERTISEMENT

₹6,957 ಕೋಟಿ ಮೊತ್ತದ ಕಾಜಿರಂಗ ಕಾರಿಡಾರ್‌ ಶಂಕುಸ್ಥಾಪನೆ ಮಾಡಲಿರುವ ಪ್ರಧಾನಿ ಮೋದಿ

ಪಿಟಿಐ
Published 18 ಜನವರಿ 2026, 5:56 IST
Last Updated 18 ಜನವರಿ 2026, 5:56 IST
   

ಗುವಾಹಟಿ: ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ನಿರ್ಮಾಣವಾಗುತ್ತಿರುವ ಕಾರಿಡಾರ್‌ಗೆ ಭಾನುವಾರ(ಜ.18) ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕಾಜಿರಂಗ ಕಾರಿಡಾರ್‌ನಿಂದ ರಾಷ್ಟ್ರೀಯ ಉದ್ಯಾನದಲ್ಲಿ ವನ್ಯಜೀವಿಗಳ ಓಡಾಟಕ್ಕೆ ಸಹಾಯವಾಗಲಿದೆ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಜಿರಂಗ ಕಾರಿಡಾರ್‌ ಯೋಜನೆಯು ಅಸ್ಸಾಂ ರಾಜ್ಯದ ಕೇಂದ್ರ ಭಾಗ ಮತ್ತು ಉತ್ತರ ಭಾಗದ ನಡುವೆ ಸಂಪರ್ಕ ಬೆಸೆಯಲು ಸಹಾಯವಾಗಲಿದೆ ಹಾಗೂ ರಾಷ್ಟ್ರೀಯ ಉದ್ಯಾನದ ಜೀವ ವೈವಿಧ್ಯವನ್ನು ರಕ್ಷಿಸುವ ದೃಷ್ಟಿಯಲ್ಲಿ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಸುಪ್ರೀಂ ಕೋರ್ಟ್‌ ಹಾಗೂ ಭಾರತೀಯ ವನ್ಯಜೀವಿ ಸಂಸ್ಥೆಯ ನಿರ್ದೇಶನದಂತೆ ಕಾಜಿರಂಗ ಕಾರಿಡಾರ್‌ ಯೋಜನೆಯ ನೀಲನಕ್ಷೆಯನ್ನು ತಯಾರಿಸಲಾಗಿತ್ತು. 3 ವರ್ಷದೊಳಗೆ ಈ ಯೋಜನೆಯ ಕಾಮಗಾರಿ ಸಂಪೂರ್ಣವಾಗಲಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ –37ರ ಕಲಿಯಾಬೋರ್-ನುಮಲಿಗಢ ಚತುಷ್ಪಥ ರಸ್ತೆ ಹಾಗೂ ಜಖಲಬಂಧ ಮತ್ತು ಬೊಕಾಖಾತ್ ಬೈಪಾಸ್‌ ನಡುವಿನ 34.45 ಕಿ.ಮೀ ಉದ್ದದಲ್ಲಿ ಕಾಜಿರಂಗ ಕಾರಿಡಾರ್‌ ನಿರ್ಮಾಣವಾಗುತ್ತಿದೆ. ಪ್ರವಾಹದ ಸಂದರ್ಭದಲ್ಲಿ ಪ್ರಾಣಿಗಳು ರಸ್ತೆ ದಾಟಲು ಸಹಾಯವಾಗುವಂತೆ ಈ ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ₹6,957 ಕೋಟಿ ವೆಚ್ಚ ಮಾಡಲಾಗುತ್ತಿದೆ.

ಕಾಜಿರಂಗ ರಾಷ್ಟ್ರೀಯ ಉದ್ಯಾನವು ಹುಲಿ ಸಂರಕ್ಷಿತ ಹಾಗೂ ಜೀವವೈವಿದ್ಯ ತಾಣವಾಗಿದೆ. ಜಗತ್ತಿನಲ್ಲೇ ಅತಿಹೆಚ್ಚು ಒಂದು ಕೊಂಬಿನ ಖಡ್ಗಮೃಗಗಳು, ಹೆಚ್ಚಿನ ಸಂಖ್ಯೆಯ ಹುಲಿ, ಆನೆ, ನಿರಾನೆ, ಜಿಂಕೆ ಸೇರಿದಂತೆ ಹಲವು ಪ್ರಬೇಧದ ಪ್ರಾಣಿ – ಪಕ್ಷಿಗಳು ಇಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.