ಕೇದಾರನಾಥ
– ಪಿಟಿಐ
ಬೆಂಗಳೂರು: ಉತ್ತರ ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳಾದ ಕೇದಾರನಾಥ್ ಹಾಗೂ ಬದ್ರಿನಾಥ್ ಧಾಮಗಳು ಯಾತ್ರಿಕರಿಗಾಗಿ ಪುನಃ ತೆರೆಯಲಾಗುತ್ತಿದೆ.
ಮೇ 2 ರಂದು ಕೇದಾರನಾಥ್ ಧಾಮ ಭಕ್ತಾದಿಗಳಿಗೆ ತೆರೆಯಲಿದೆ. ಮೇ 4 ರಂದು ಬದ್ರಿನಾಥ್ ಧಾಮ ಭಕ್ತಾದಿಗಳಿಗೆ ತೆರೆಯಲಿದೆ ಎಂದು ಶ್ರೀ ಬದ್ರಿನಾಥ್ ಕೇದಾರನಾಥ್ ದೇವಸ್ಥಾನ ಸಮಿತಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಹವಾಮಾನ ವೈಪರಿತ್ಯದಿಂದ ಭಕ್ತಾದಿಗಳಿಗೆ ತೊಂದರೆ ಆಗಬಾರದೆಂದು ಈ ಧಾಮಗಳನ್ನು ನವೆಂಬರ್‌ನಿಂದ ಏಪ್ರಿಲ್‌ವರೆಗೆ ಮುಚ್ಚಲಾಗಿರುತ್ತದೆ.
ಚಾರ್‌ಧಾಮ ಯಾತ್ರೆ ಎಂದು ಪ್ರಸಿದ್ಧವಾಗಿರುವ ಕೇದಾರನಾಥ್, ಬದ್ರಿನಾಥ್, ಗಂಗೋತ್ರಿ, ಯಮನೋತ್ರಿ ಯಾತ್ರೆಗಳು ಉತ್ತರ ಭಾರತದ ಪ್ರಸಿದ್ಧ ಯಾತ್ರಾಸ್ಥಳಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.