ADVERTISEMENT

‘ದೆಹಲಿ ಸೋಲಾರ್‌ ನೀತಿ’ಯ ಅಧಿಸೂಚನೆ ಪ್ರಕಟ

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರವು ‘ದೆಹಲಿ ಸೋಲಾರ್‌ ನೀತಿ –2023’ರ ಸಂಬಂಧ ಅಧಿಸೂಚನೆ ಹೊರಡಿಸಿದೆ.

ಪಿಟಿಐ
Published 16 ಮಾರ್ಚ್ 2024, 14:57 IST
Last Updated 16 ಮಾರ್ಚ್ 2024, 14:57 IST
<div class="paragraphs"><p>ಸೋಲಾರ್‌</p></div>

ಸೋಲಾರ್‌

   

ನವದೆಹಲಿ: ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರವು ‘ದೆಹಲಿ ಸೋಲಾರ್‌ ನೀತಿ –2023’ರ ಸಂಬಂಧ ಅಧಿಸೂಚನೆ ಹೊರಡಿಸಿದೆ.

‘ಈ ಯೋಜನೆಗಾಗಿ ಸರ್ಕಾರವು ₹570 ಕೋಟಿ ಮೀಸಲಿರಿಸಿದೆ. ಇದು ಸೋಲಾರ್‌ ಪ್ಯಾನಲ್‌ ಅಳವಡಿಸುವವರಿಗೆ ಪ್ರೋತ್ಸಾಹ ನೀಡುತ್ತದೆ ಮತ್ತು ತಿಂಗಳಿಗೆ ₹900 ಹೆಚ್ಚುವರಿ ಗಳಿಕೆಗೆ ಅವಕಾಶ ನೀಡುತ್ತದೆ’ ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ.

ADVERTISEMENT

‘ಈ ಯೋಜನೆಯಡಿ ಚಾವಣಿ ಸೋಲಾರ್‌ ಘಟಕವನ್ನು ಅಳವಡಿಸಿಕೊಂಡರೆ, 400 ಯೂನಿಟ್‌ಗಿಂತ ಅಧಿಕ ವಿದ್ಯುತ್‌ ಬಳಸಿ ಹಣ ಪಾವತಿಸುತ್ತಿದ್ದ ಗ್ರಾಹಕರು ಕೂಡ ಶೂನ್ಯ ಬಿಲ್‌ ಪಡೆಯಬಹುದು’ ಎಂದು ಮಾಹಿತಿ ನೀಡಿದೆ.

‘ಸೋಲಾರ್‌ ಅಳವಡಿಕೆಯಿಂದ ವಾಣಿಜ್ಯ ಬಳಕೆದಾರರು ಈಗ ಪಾವತಿಸುತ್ತಿರುವ ಹಣದ ಅರ್ಧದಷ್ಟು ಉಳಿತಾಯ ಮಾಡಬಹುದು’ ಎಂದು ತಿಳಿಸಿದೆ.

ದೆಹಲಿ ಸರ್ಕಾರವು ಗೃಹಬಳಕೆದಾರರಿಗೆ 200 ಯೂನಿಟ್‌ ವಿದ್ಯುತ್‌ ಉಚಿತವಾಗಿ ನೀಡುತ್ತಿದೆ. 200ರಿಂದ 400 ಯೂನಿಟ್‌ ಬಳಸುವವರಿಗೆ ಬಿಲ್ ಮೊತ್ತದ ಶೇ 50 ರಷ್ಟು ರಿಯಾಯಿತಿ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.