ADVERTISEMENT

ಆಪ್‌ ಸರ್ಕಾರದಿಂದ ಉಚಿತ ಯಾತ್ರಾ ಯೋಜನೆ

ಪಿಟಿಐ
Published 5 ಡಿಸೆಂಬರ್ 2018, 18:25 IST
Last Updated 5 ಡಿಸೆಂಬರ್ 2018, 18:25 IST
   

ನವದೆಹಲಿ:‘ಮುಖ್ಯಮಂತ್ರಿ ತೀರ್ಥ ಯಾತ್ರೆ ಯೋಜನೆ’ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಬುಧವಾರ ಚಾಲನೆ ನೀಡಿದರು.

70 ವಿಧಾನಸಭಾ ಕ್ಷೇತ್ರಗಳ 1,100 ಹಿರಿಯ ನಾಗರಿಕರು ಈ ಯೋಜನೆಯ ಅನುಕೂಲ ಪಡೆಯಬಹುದು.

ಈ ಯೋಜನೆ ಅನುಸಾರ 60 ವರ್ಷದವರು ತಮ್ಮ ಪತಿ ಅಥವಾ ಪತ್ನಿಯೊಂದಿಗೆ ಉಚಿತ ಯಾತ್ರೆ ಕೈಗೊಳ್ಳಬಹುದು.

ADVERTISEMENT

ಅರ್ಜಿದಾರರ ಸಂಗಾತಿ 70 ವರ್ಷ ಮೇಲ್ಪಟ್ಟಿದ್ದರೆ ಅವರೊಂದಿಗೆ 20 ವರ್ಷದವರನ್ನು ಕರೆದುಕೊಂಡು ಹೋಗುವ ಅವಕಾಶವನ್ನು ಒದಗಿಸಲಾಗಿದೆ.

ಎರಡು ಹಗಲು, ಮೂರು ಯಾತ್ರೆ ಕೈಗೊಳ್ಳಬಹುದು.ಕಳೆದ ಜುಲೈ ತಿಂಗಳಲ್ಲಿ ಈ ಯೋಜನೆಗೆ ಆಪ್‌ ಸರ್ಕಾರ ಅನುಮೋದನೆ ನೀಡಿದೆ. ಸರ್ಕಾರ ಪ್ರತಿ ವರ್ಷ ಈ ಯೋಜನೆಗೆ ₹ 77 ಸಾವಿರ ಭರಿಸಲಿದೆ. ಸರ್ಕಾರಿ ನೌಕರರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.

‘ಹಿರಿಯರಿಗೆ ಗೌರವ ನೀಡದಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.