ADVERTISEMENT

ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಳ: ಕೇರಳದಲ್ಲಿ ನಾಳೆಯಿಂದ 9 ದಿನ ಲಾಕ್‌ಡೌನ್‌

ಪಿಟಿಐ
Published 6 ಮೇ 2021, 15:22 IST
Last Updated 6 ಮೇ 2021, 15:22 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ತಿರುವನಂತಪುರ: ರಾಜ್ಯದಲ್ಲಿ ಕೋವಿಡ್‌–19 ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಕಾರಣ ಕೇರಳ ಸರ್ಕಾರ ಇದೇ 8ರಿಂದ 16ರ ವರೆಗೆ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿದೆ.

8ರ ಬೆಳಿಗ್ಗೆಯಿಂದಲೇ ಲಾಕ್‌ಡೌನ್ ಜಾರಿಯಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೋವಿಡ್‌ ಪ್ರಸರಣ ತಡೆಯುವ ಸಲುವಾಗಿ ರಾಜ್ಯದ ದಕ್ಷಿಣ ಭಾಗದಲ್ಲಿ ಈಗಾಗಲೇ ಕಠಿಣ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ.

ADVERTISEMENT

ರಾಜ್ಯದಲ್ಲಿ ಬುಧವಾರ ಹೊಸದಾಗಿ 41,953 ಪ್ರಕರಣಗಳು ವರದಿಯಾಗಿದ್ದು, ಒಂದು ದಿನದಲ್ಲಿ ಪತ್ತೆಯಾದ ಗರಿಷ್ಠ ಸಂಖ್ಯೆಯ ಪ್ರಕರಣಗಳು ಇವಾಗಿವೆ.

ಪೆರೋಲ್‌ ನೀಡಲು ನಿರ್ಧಾರ: ರಾಜ್ಯದ ಜೈಲುಗಳಲ್ಲಿರುವ ಅರ್ಹ ಕೈದಿಗಳಿಗೆ ಎರಡು ವಾರಗಳ ಅವಧಿಗೆ ಪೆರೋಲ್‌ ನೀಡಲು ಸಹ ಸರ್ಕಾರ ತೀರ್ಮಾನಿಸಿದೆ.

ಜೈಲುಗಳಲ್ಲಿನ ಕೈದಿಗಳ ಸಂಖ್ಯೆ ಮಾಡುವುದು ಹಾಗೂ ಮೂಲಕ ವ್ಯಕ್ತಿಗತ ಅಂತರ ಕಾಪಾಡುವುದು ಇದರ ಉದ್ದೇಶವಾಗಿದೆ ಎಂದು ಮೂಲಗಳು ಹೇಳಿವೆ. ರಾಜ್ಯದ 54 ಜೈಲುಗಳಲ್ಲಿ 6,000ಕ್ಕೂ ಅಧಿಕ ಕೈದಿಗಳಿದ್ದಾರೆ ಎಂದು ಇವೇ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.