ADVERTISEMENT

ಮಲಪ್ಪುರಂನ ಕೋಚಿಂಗ್ ಸೆಂಟರ್‌ನ 91 ವಿದ್ಯಾರ್ಥಿಗಳಿಗೆ ಕೊರೊನಾ

ಪಿಟಿಐ
Published 9 ಫೆಬ್ರುವರಿ 2021, 19:00 IST
Last Updated 9 ಫೆಬ್ರುವರಿ 2021, 19:00 IST
covid-19-india-student-featured-image
covid-19-india-student-featured-image   

ಮಲಪ್ಪುರಂ (ಕೇರಳ): ಇಲ್ಲಿನ ಕೋಚಿಂಗ್ ಸೆಂಟರ್‌ವೊಂದು ಕೊರೊನಾ ಹರಡುವಲ್ಲಿ ‘ಸೂಪರ್–ಸ್ಪ್ರೆಡರ್‌‘ ಆಗಿದೆ. ಇಲ್ಲಿ ಕೋಚಿಂಗ್‌ ಬರುತ್ತಿದ್ದ ಪೊನ್ನಾನಿಯ ಮರಾಂಚೆರಿ ಸರ್ಕಾರಿ ಶಾಲಾಯ 91 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹರಡಿದೆ.

ಸೋಮವಾರ ಕೋಚಿಂಗ್ ಸೆಂಟರ್‌ ಅನ್ನು ಮುಚ್ಚಿಸಿದತಿರೂರು ಜಿಲ್ಲಾ ಶಿಕ್ಷಣ ಅಧಿಕಾರಿ ರಮೇಶ್ ಕುಮಾರ್ ಅವರು ಮಾತನಾಡಿ, ‘ಮತ್ತಷ್ಟು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುವುದು. ಮರಾಂಚೆರಿ ಮತ್ತು ಪೊನ್ನಾನಿಯ ಎರಡೂ ಶಾಲಾ ವಿದ್ಯಾರ್ಥಿಗಳಿಗೆ ಸೋಂಕು ಹರಡಿದ್ದು, ಸುತ್ತಮುತ್ತಲಿನ ಮತ್ತಷ್ಟು ಶಾಲೆಗಳಿಗೆ ಕೊರೊನಾ ಸೋಂಕು ಹರಡುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಹಲವು ಶಾಲೆಗಳನ್ನು ಮುಚ್ಚಲಾಗಿದೆ‘ ಎಂದರು.

’ಸೋಂಕು ಹರಡುತ್ತಿದ್ದ ಸರಪಳಿಯನ್ನು ಬೇಗ ತುಂಡರಿಸಿದ್ದೇವೆ. ಇದುವರೆಗೆ ಮರಾಂಚೆರಿ ಶಾಲೆಯ 148 ವಿದ್ಯಾರ್ಥಿಗಳು ಮತ್ತು 37 ಶಿಕ್ಷಕರು, ವಾನ್ನೇರಿಯ 42 ವಿದ್ಯಾರ್ಥಿಗಳು ಮತ್ತು 42 ಶಿಕ್ಷಕರಿಗೆ ಸೋಂಕು ಹರಡಿದೆ. ಮತ್ತಷ್ಟು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸೋಂಕು ಹರಡಿರುವ ಸಾಧ್ಯತೆ ಇದೆ‘ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

’ಎಷ್ಟು ವಿದ್ಯಾರ್ಥಿಗಳು ಕೋಚಿಂಗ್‌ ಸೆಂಟರ್‌ಗೆ ಬರುತ್ತಿದ್ದರು ಎಂಬ ಬಗ್ಗೆ ಯಾವುದೇ ದಾಖಲೆ ಸಿಗುತ್ತಿಲ್ಲ. ಮೊದಲ ಬಾರಿ ವಿದ್ಯಾರ್ಥಿಗೆ ಸೋಂಕು ಹರಡಿರುವುದು ಖಚಿತವಾಗುತ್ತಿದ್ದಂತೆ ಕೋಚಿಂಗ್‌ ಸೆಂಟರ್‌ ಸ್ಥಗಿತಗೊಂಡಿದೆ. ಈ ಎರಡು ಶಾಲೆಯ ಸಂಪೂರ್ಣ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕೊರೊನಾ ಸೋಂಕು ಇಲ್ಲ ಎಂದಾದಲ್ಲಿ ಮಾತ್ರ ಶಾಲೆಗಳು ಪುನಃ ಆರಂಭಗೊಳ್ಳಲಿದೆ.‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ನ್ಯಾಯಾಧೀಶರು ಕೋಚಿಂಗ್ ಸೆಂಟರ್ ಸ್ಥಳ ಪರಿಶೀಲನೆ ನಡೆಸಲಿದ್ದು, ಕೋವಿಡ್‌ ತಡೆ ಶಿಷ್ಟಾಚಾರ ಪಾಲಿಸದಿದ್ದಲ್ಲಿ ಕ್ರಮ ಜರುಗಿಸಲಿದ್ದಾರೆ.

ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಮತ್ತು ಪೊನ್ನಾನಿ ಪುರಸಭೆಯ ಸದಸ್ಯರ ಜತೆ ಸೋಮವಾರ ಸಭೆ ನಡೆಸಿದ ಜಿಲ್ಲಾಧಿಕಾರಿ ಕೆ. ಗೋಪಾಲಕೃಷ್ಣನ್ ಅವರು ಈ ಪ್ರದೇಶದ ಇನ್ನೂ ಆರು ಶಾಲೆಗಳಲ್ಲಿ ಕೋವಿಡ್‌ ಪರೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.