ADVERTISEMENT

ಕೇರಳದಲ್ಲಿ 77.68% ಮತ ಚಲಾವಣೆ: ಕಣ್ಣೂರಿನಲ್ಲಿ ಗರಿಷ್ಠ 83.05% ಮತದಾನ

​ಪ್ರಜಾವಾಣಿ ವಾರ್ತೆ
Published 9 ಮೇ 2019, 17:44 IST
Last Updated 9 ಮೇ 2019, 17:44 IST
   

ತಿರುವನಂತಪುರಂ: ಏಪ್ರಿಲ್ 23ರಂದು ಕೇರಳದಲ್ಲಿ ನಡೆದ ಲೋಕಸಭಾ ಚುನಾವಣೆಯ ಮತದಾನದಲ್ಲಿ ಒಟ್ಟಾರೆ ಶೇ.77. 68 ಮತದಾನ ಆಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.ಕೇರಳದಲ್ಲಿ ಒಟ್ಟು 203,13,833 ಮತದಾರರು ಮತದಾನ ಚಲಾವಣೆ ಮಾಡಿದ್ದು 2014ರ ಲೋಕಸಭಾ ಚುನಾವಣೆಯ ಮತದಾನಕ್ಕಿಂತ ಹೆಚ್ಚು ಮತದಾನ ಆಗಿದೆ.

ಕೇರಳದ 20 ಲೋಕಸಭಾ ಕ್ಷೇತ್ರಗಳಿಗಾಗಿ ಏಪ್ರಿಲ್ 23 ಮಂಗಳವಾರ ಒಂದೇ ಹಂತದ ಚುನಾವಣೆ ನಡೆದಿದೆ.

ಕೇರಳದ ಕಣ್ಣೂರು ಲೋಕಸಭಾ ಕ್ಷೇತ್ರದಲ್ಲಿ ಗರಿಷ್ಠ ಶೇ. 83.05 ಮತದಾನವಾಗಿದ್ದು, ತಿರುವನಂತಪುರಂನಲ್ಲಿ ಕನಿಷ್ಠ ಶೇ.73.45 ಮತದಾನವಾಗಿದೆ.

ADVERTISEMENT

ತಿರುವನಂತಪುರಂನಲ್ಲಿ ಯುಡಿಎಫ್ ಅಭ್ಯರ್ಥಿ ಶಶಿ ತರೂರ್, ಎಲ್‌ಡಿಎಫ್ಅಭ್ಯರ್ಥಿ ಸಿ.ದಿವಾಕರನ್ ಮತ್ತು ಎನ್‍ಡಿಎ ಅಭ್ಯರ್ಥಿ ಕುಮ್ಮನಂ ರಾಜಶೇಖರ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದೆ.

ಇನ್ನುಳಿದಂತೆ ವಯನಾಡ್-80.31%,ಚಾಲಕ್ಕುಡಿ-80.44% ,ಆಲಪ್ಪುಳ-80.09% ,ಅಲತ್ತೂರ್ - 80.33% ಕಾಸರಗೋಡು-80.57%ಲೋಕಸಭಾ ಕ್ಷೇತ್ರಗಳಲ್ಲಿ ಅತೀ ಹೆಚ್ಚು ಮತದಾನ ನಡೆದಿದೆ.
ವಯನಾಡಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಣಕ್ಕಿಳಿದಿರುವುದರಿಂದ ಈ ಲೋಕಸಭಾ ಕ್ಷೇತ್ರ ಹೆಚ್ಚಿನ ಗಮನ ಸೆಳೆದಿದೆ.

ವಡಕರ ಮತ್ತು ಕೋಝಿಕ್ಕೋಡ್ ಲೋಕಸಭಾ ಕ್ಷೇತ್ರಗಳಲ್ಲಿ ಕ್ರಮವಾಗಿ 82.48% ಮತ್ತು 81.47% ಮತದಾನವಾಗಿದೆ.
ಇತರ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಈ ರೀತಿ ಇದೆ.
ಪಾಲಕ್ಕಾಡ್-77.67%
ತ್ರಿಶ್ಶೂರ್ -77.86%
ಎರ್ನಾಕುಳಂ- 77.54%.
ಇಡುಕ್ಕಿ- 76.01%
ಕೋಟ್ಟಯಂ - 75.29%
ಮಲಪ್ಪುರಂ - 75.43%
ಆಟ್ಟಿಂಗಲ್ -74.23%
ಕೊಲ್ಲಂ -74.36%
ಮಾವೇಲಿಕ್ಕರ - 74.09%
ಪತ್ತನಂತಿಟ್ಟ- 74.19%
ಪೊನ್ನಾನಿ -74.96%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.