ADVERTISEMENT

ತಂದೆಯೊಂದಿಗೆ ಶಬರಿಮಲೆ ದರ್ಶನಕ್ಕೆ ತೆರಳಲು ಬಾಲಕಿಗೆ ಹೈಕೋರ್ಟ್‌ ಅನುಮತಿ

ಪಿಟಿಐ
Published 17 ಆಗಸ್ಟ್ 2021, 6:46 IST
Last Updated 17 ಆಗಸ್ಟ್ 2021, 6:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಚ್ಚಿ: ತನ್ನ ತಂದೆಯೊಂದಿಗೆ ಶಬರಿಮಲೆ ದೇಗುಲ ದರ್ಶನಕ್ಕೆ ತೆರಳಲು ಬಾಲಕಿಯೊಬ್ಬಳಿಗೆ ಕೇರಳ ಹೈಕೋರ್ಟ್‌ ಮಂಗಳವಾರ ಅನುಮತಿ ನೀಡಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ಇಂಥದ್ದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ಆದೇಶ ಮತ್ತು ‘ಕೋವಿಡ್‌ ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳ ಜೊತೆಯಲ್ಲಿ ಮಕ್ಕಳು ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಬಹುದು‘ ಎಂಬ ರಾಜ್ಯ ಸರ್ಕಾರ ಆಗಸ್ಟ್‌ 4 ರಂದು ಹೊರಡಿಸಿರುವ ಆದೇಶವನ್ನು ಆಧರಿಸಿ ನ್ಯಾಯಾಲಯ ಈ ಅನುಮತಿ ನೀಡಿದೆ.

ಒಂಬತ್ತು ವರ್ಷದ ಬಾಲಕಿಯು ಆಗಸ್ಟ್ 23 ರಂದು ತನ್ನ ತಂದೆಯೊಂದಿಗೆ ಶಬರಿಮಲೆಗೆ ತೆರಳಲು ಅನುಮತಿ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಳು. ಆಕೆಯ ಮನವಿಯನ್ನು ಪರಿಶೀಲಿಸಿದ ನ್ಯಾಯಾಲಯ ಈ ರೀತಿ ಆದೇಶ ನೀಡಿದೆ.

ADVERTISEMENT

ಬಾಲಕಿಯ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ, ‘ಆಕೆ ಹತ್ತು ವರ್ಷ ತುಂಬುವ ಮೊದಲೇ ಶಬರಿಮಲೆಗೆ ಹೋಗಲು ಬಯಸಿದ್ದಾಳೆ, ಮುಂದೆ ನಾಲ್ಕು ದಶಕಗಳ ಕಾಲ ಶ್ರೀಕ್ಷೇತ್ರಕ್ಕೆ ಭೇಟಿ ನೀಡಲು ಆಕೆಗೆ ಸಾಧ್ಯವಾಗದಿರಬಹುದು‘ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ‘ಅರ್ಜಿದಾರರ ಅಭಿಪ್ರಾಯವನ್ನು ಪರಿಗಣಿಸಿ, ಆಗಸ್ಟ್‌ 23ರಂದು ತನ್ನ ತಂದೆಯೊಂದಿಗೆ ಶಬರಿಮಲೆಗೆ ತೆರಳಲು ಬಾಲಕಿಗೆ ಅನುಮತಿ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.