
ಮದುವೆ (ಪ್ರಾತಿನಿಧಿಕ ಚಿತ್ರ)
(ಐಸ್ಟೋಕ್ ಚಿತ್ರ)
ಕೊಚ್ಚಿ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವಧುವೊಬ್ಬರು ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿಯೇ ಮದುವೆಯಾದ ಅಪರೂಪದ ಘಟನೆಯೊಂದು ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ಆಲಪ್ಪುಳ ನಿವಾಸಿ ಅವನಿ ಮತ್ತು ಥುಂಬೊಳಿಯ ವಿ.ಎಂ ಶರೊಣ್ ಅವರ ವಿವಾಹವು ಶುಕ್ರವಾರ ಮಧ್ಯಾಹ್ನ ನಿಗದಿಯಾಗಿತ್ತು. ಅದೇ ದಿನ ಬೆಳಿಗ್ಗೆ ‘ಮೇಕಪ್’ ಮಾಡಿಸಿಕೊಳ್ಳಲು ಹೋಗುತ್ತಿದ್ದ ವೇಳೆ ಅವನಿ ಅವರ ಕಾರು ಅಪಘಾತಕ್ಕೀಡಾಗಿದ್ದು, ಬೆನ್ನುಹುರಿಗೆ ಗಾಯವಾಗಿದ್ದರಿಂದ ಅವರಿಗೆ ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿತ್ತು.
ಆಸ್ಪತ್ರೆಗೆ ಬಂದ ಶರೊಣ್ ಮತ್ತು ಅವನಿ ಕುಟುಂಬಸ್ಥರು, ಪೂರ್ವನಿಗದಿಯಂತೆ 12:15ರಿಂದ 12:30ರೊಳಗಿನ ಮಹೂರ್ತದಲ್ಲಿ ವಿವಾಹ ನೆರವೇರಿಸಲು ಅವಕಾಶ ಕಲ್ಪಿಸಿಕೊಡುವಂತೆ ಆಸ್ಪತ್ರೆಯವರಿಗೆ ಮನವಿ ಮಾಡಿದ್ದರು. ಅವರ ಮನವಿಯನ್ನು ಒಪ್ಪಿ, ತುರ್ತುನಿಗಾ ಘಟಕದಲ್ಲಿ ವಿವಾಹಕ್ಕೆ ವ್ಯವಸ್ಥೆ ಮಾಡಿಕೊಡಲಾಯಿತು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.