ಕೇರಳದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ
ತಿರುವನಂತಪುರಂ: ಕೇರಳದ ಹಲವು ಜಿಲ್ಲೆಗಳಲ್ಲಿ ತೀವ್ರ ಮಳೆಯಾಗುತ್ತಿರುವ ಕಾರಣ ನದಿ ನೀರಿನ ಮಟ್ಟ ಏರಿಕೆಯಾಗಿ ತಗ್ಗು ಪ್ರದೇಶದಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ಭಾರತೀಯ ಹವಮಾನ ಇಲಾಖೆ ಒಂಬತ್ತು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ’ ಘೋಷಿಸಿದೆ.
ಎರ್ನಾಕುಲಂ, ಇಡುಕ್ಕಿ, ತ್ರಿಶ್ಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡು, ಕಣ್ಣೂರು, ಮತ್ತು ಕಾಸರಗೋಡು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ’ ಘೋಷಿಸಲಾಗಿದ್ದು. ಇನ್ನುಳಿದ ಐದು ಜಿಲ್ಲೆಗಳಿಗೆ ’ಯೆಲ್ಲೋ ಅಲರ್ಟ’ ಘೋಷಿಸಿದೆ.
ರಾಜ್ಯದಾದ್ಯಂತ ಸಾಧಾರಣವಾಗಿ ಮಳೆ ಆಗಲಿದೆ ಮತ್ತು ಗಂಟೆಗೆ 40 ಕಿ.ಮೀ.ಮಳೆಯಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.
ಜಿಲ್ಲೆಯಲ್ಲಿನ ಎಲ್ಲಾ ಅಣೆಕಟ್ಟುಗಳ ಗೇಟ್‌ಗಳನ್ನು ತೆರೆಯಲಾಗಿದೆ ಎಂದು ಪಾಲಕ್ಕಾಡ್ ಜಿಲ್ಲಾಡಳಿತ ತಿಳಿಸಿದೆ.
ನೀರಾವರಿ ವಿನ್ಯಾಸ ಮತ್ತು ಸಂಶೋಧನಾ ಮಂಡಳಿಯು ಪತ್ತನಂತಿಟ್ಟ ಜಿಲ್ಲೆಯ ಮಣಿಮಾಲ ಮತ್ತು ಕಾಸರಗೋಡು ಜಿಲ್ಲೆ ಯ ಮೊಗ್ರಾಲ್ ನದಿಗಳ ಮಟ್ಟ ತೀವ್ರವಾಗುತ್ತಿರುವ ಕಾರಣ ಅಪಾಯದ ಎಚ್ಚರಿಕೆ ನೀಡಿದೆ.
ನದಿ ಸಮೀಪದಲ್ಲಿ ವಾಸವಿರುವ ಜನರಿಗೆ ಸುರಕ್ಷಿತವಾಗಿರಲು ಜಿಲ್ಲಾ ಆಡಳಿತವು ಸೂಚಿಸಿದ್ದು, ಪರಿಸ್ಥಿತಿ ಬಿಗಡಾಯಿಸಿದರೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸಿದ್ಧವಿರಬೇಕು ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.