
ಕೇರಳ ಸ್ಟೋರಿ 2
(ಕೃಪೆ: ಐಎಂಡಿಬಿ)
ಕೊಚ್ಚಿ: 'ದಿ ಕೇರಳ ಸ್ಟೋರಿ - ಗೋಸ್ ಬಿಯಾಂಡ್' ಚಿತ್ರವು ಕೇರಳದಂತದ ಜಾತ್ಯತೀತ ರಾಜ್ಯವನ್ನು ತಪ್ಪು ರೀತಿಯಲ್ಲಿ ಬಿಂಬಿಸುತ್ತದೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೇರಳದಲ್ಲಿ ಜನರು ಕೋಮು ಸೌಹಾರ್ದದಲ್ಲಿ ಬದುಕುತ್ತಾರೆ. ಹಾಗಿರುವಾಗ ಕೇರಳದ ಹೆಸರನ್ನು ಬಳಕೆ ಮಾಡುವುದು ಮತ್ತು ಚಿತ್ರವು ನೈಜ ಸಂಗತಿಗಳನ್ನು ಆಧರಿಸಿದೆ ಎಂದು ಹೇಳಿಕೊಳ್ಳುವುದು ಕೋಮು ಉದ್ವಿಗ್ನತೆಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದೆ
ಕೇರಳ ಸ್ಟೋರಿ 2 ಚಿತ್ರಕ್ಕೆ ನೀಡಲಾದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಮೂರು ಪ್ರತ್ಯೇಕ ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಈ ಕುರಿತು ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರದ ಟೀಸರ್ ತೆಗೆಯಲು ಸಿದ್ಧವಿರುವುದಾಗಿ ನಿರ್ಮಾಪಕ ನ್ಯಾಯಾಲಯಕ್ಕೆ ತಿಳಿಸಿದರು.
ಫೆಬ್ರುವರಿ 27ರಂದು ಬಿಡುಗಡೆಯಾಗಲಿರುವ ಸಿನಿಮಾದ ಪ್ರಮಾಣೀಕರಣದ ಬಗ್ಗೆ ಮತ್ತೆ ಬುಧವಾರ ವಿಚಾರಣೆ ನಡೆಯಲಿದೆ. ತೀರ್ಪಿಗೂ ಮೊದಲು ಚಿತ್ರವನ್ನು ವೀಕ್ಷಿಸಲು ಇಂಗಿತ ವ್ಯಕ್ತಪಡಿಸಿತು.
ಈ ಚಿತ್ರವು ಎಲ್ಲ ಮಾನದಂಡಗಳನ್ನು ಅನುಸರಿಸಿದೆಯೇ ಎಂದೂ ಸೆನ್ಸಾರ್ ಮಂಡಳಿಯನ್ನು ಕೋರ್ಟ್ ಪ್ರಶ್ನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.