ADVERTISEMENT

ಗುರು ಪೂರ್ಣಿಮೆ | ಕೇರಳದಲ್ಲಿ ಶಿಕ್ಷಕರ ಪಾದ ತೊಳೆದ ವಿದ್ಯಾರ್ಥಿಗಳು: ವಿವಾದ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 15:19 IST
Last Updated 12 ಜುಲೈ 2025, 15:19 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

Credit: iStock photo

ತಿರುವನಂತಪುರ: ಗುರು ಪೂರ್ಣಿಮೆಯ ‍ಪ್ರಯುಕ್ತ ಕೇರಳದ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಪಾದ ತೊಳೆದು ಪೂಜೆ ನೆರವೇರಿಸಿದ್ದ ವಿಚಾರ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆಚರಣೆ ಕುರಿತು ರಾಜ್ಯ ಶಿಕ್ಷಣ ಸಚಿವರೇ ಆಕ್ಷೇಪ ವ್ಯಕ್ತಪಡಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಶಿಕ್ಷಣ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. 

ADVERTISEMENT

ಕಾಸರಗೋಡಿನ ಸರಸ್ವತಿ ವಿದ್ಯಾಲಯ, ಮಾವೇಲಿಕ್ಕರದ ವಿದ್ಯಧೀರಜ ವಿದ್ಯಾಪೀಠಂ, ವಿವೇಕಾನಂದ ವಿದ್ಯಾಪೀಠಂ ಸೇರಿದಂತೆ ವಿವಿಧ ಶಾಲೆಗಳಲ್ಲಿ ಜುಲೈ 10ರಂದು ಗುರುಪೂರ್ಣಿಮೆಯ ಆಚರಣೆ ನಡೆದಿದೆ.

ಈ ಕಾರ್ಯಕ್ರಮಗಳ ಹಲವು ವಿಡಿಯೊಗಳು ಹರಿದಾಡಿದ್ದು, ವಿದ್ಯಾರ್ಥಿಗಳು ಶಿಕ್ಷಕರ ಪಾದ ತೊಳೆಯುತ್ತಿರುವ ದೃಶ್ಯಗಳು ಅದರಲ್ಲಿವೆ. 

ಇದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ವಿ.ಶಿವಕುಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದು, ಕೇರಳದಂಥ ಪ್ರಗತಿಪರ ಸಮಾಜದಲ್ಲಿ ಮಕ್ಕಳ ಕೈಯಲ್ಲಿ ಶಿಕ್ಷಕರ ಪಾದ ತೊಳೆಸುವಂಥ ಆಚರಣೆಗಳು ಸರಿಯಲ್ಲ ಎಂದಿದ್ದಾರೆ.

ಯಾವುದೇ ವಿದ್ಯಾರ್ಥಿಯನ್ನು ಬಲವಂತವಾಗಿ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿಲ್ಲ. ಕಳೆದ ವರ್ಷವೂ ಹಲವು ಶಾಲೆಗಳಲ್ಲಿ ಈ ರೀತಿಯ ಆಚರಣೆ ನಡೆದಿತ್ತು ಎಂದು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗಳು ಹೇಳಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.