
ಪ್ರಜಾವಾಣಿ ವಾರ್ತೆ
ತಿರುವನಂತಪುರ: ಕೇರಳದ ಸರ್ಕಾರಿ ನಿಗಮವೊಂದು ಪ್ರೇಮಿಗಳ ದಿನದ ಅಂಗವಾಗಿ ರಿಯಾಯಿತಿ ದರದಲ್ಲಿ ಸಕ್ಕರೆಯನ್ನು ನೀಡಲಿದೆ.
ಕೇರಳ ನಾಗರಿಕ ಸರಬರಾಜು ನಿಗಮವು ತನ್ನ 50ನೇ ವರ್ಷಾಚರಣೆಯ ಪ್ರಯುಕ್ತ ಈ ರಿಯಾಯಿತಿ ಸೌಲಭ್ಯವನ್ನು ಘೋಷಿಸಿದೆ.
ನಿಗಮದ ಮಳಿಗೆಗಳಿಂದ ₹1 ಸಾವಿರ ಮೌಲ್ಯದ ಸಬ್ಸಿಡಿ ರಹಿತ ವಸ್ತುಗಳನ್ನು ಖರೀದಿಸುವವರಿಗೆ ₹14 ದರದಲ್ಲಿ ಒಂದು ಕೆ.ಜಿ ಸಕ್ಕರೆ ಸಿಗಲಿದೆ. ₹500 ಮೌಲ್ಯದ ವಸ್ತುಗಳ ಜೊತೆ 500 ಗ್ರಾಂ ಸಕ್ಕರೆ ದೊರಕಲಿದೆ. ಈ ರಿಯಾಯಿತಿ ಸೌಲಭ್ಯವು ಫೆಬ್ರುವರಿ 14ರಿಂದ 28ರವರೆಗೆ ಜಾರಿಯಲ್ಲಿರಲಿದೆ.
ಯುವಕರು ಸೇರಿದಂತೆ ಹೆಚ್ಚು ಜನರನ್ನು ಸೆಳೆಯಲು ಈ ರಿಯಾಯಿತಿ ನೀಡಲಾಗಿದೆ ಎಂದು ನಿಗಮದ ನಿರ್ದೇಶಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.