ADVERTISEMENT

ಮುಂಬೈ ದಾಳಿಕೋರರಿಗೆ ರಕ್ಷಣೆ: ವಿದೇಶಾಂಗ ಸಚಿವ ಜೈಶಂಕರ್‌ ವಿಷಾದ

ಪಿಟಿಐ
Published 28 ಅಕ್ಟೋಬರ್ 2022, 10:46 IST
Last Updated 28 ಅಕ್ಟೋಬರ್ 2022, 10:46 IST
ಜೈಶಂಕರ್
ಜೈಶಂಕರ್   

ಮುಂಬೈ: ‘ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯ (26/11) ಯೋಜನೆ ರೂಪಿಸಿದವರು ಹಾಗೂ ಸಂಚು ನಡೆಸಿದವರಿಗೆ ಇನ್ನೂ ಶಿಕ್ಷೆಯಾಗಿಲ್ಲ. ಅವರನ್ನು ರಕ್ಷಿಸಲಾಗುತ್ತಿದೆ’ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಶುಕ್ರವಾರ ಅಭಿಪ್ರಾಯಪಟ್ಟರು.

ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮ ಕುರಿತಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಉಲ್ಲೇಖಿಸಿದರೂ ರಾಜಕೀಯ ಕಾರಣಗಳಿಗಾಗಿ ಕೆಲ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿಲ್ಲ ಎಂಬುದು ವಿಷಾದನೀಯ ಎಂದು ಅವರು ಹೇಳಿದರು.

‘ಭಯೋತ್ಪಾದಕ ಉದ್ದೇಶಗಳಿಗೆ ಹೊಸ, ಆಧುನಿಕ ತಂತ್ರಜ್ಞಾನಗಳ ಬಳಕೆಗೆ ಪ್ರತಿರೋಧ’ ಕುರಿತು ಇಲ್ಲಿನ ತಾಜ್ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

ಈ ಹೋಟೆಲ್‌ನ ಮೇಲೆ 26/11ರಂದು ದಾಳಿ ನಡೆದಿತ್ತು. ಆ ದಿನ ದಾಳಿ ನಡೆದಿದ್ದು ಮುಂಬೈ ಮೇಲಷ್ಟೇ ಅಲ್ಲ, ಅಂತರರಾಷ್ಟ್ರೀಯ ಸಮುದಾಯದ ಮೇಲೆ. ಗಡಿ ದಾಟಿ ಬಂದಿದ್ದ ಉಗ್ರರು ಅಂದು ಇಡೀ ಮುಂಬೈ ಅನ್ನು ಒತ್ತೆ ಇರಿಸಿಕೊಂಡಿದ್ದರು ಎಂದು ಪಾಕಿಸ್ತಾನದ ಹೆಸರು ಉಲ್ಲೇಖಿಸದೇ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.