ಪೆನುಕೊಂಡ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯಲ್ಲಿನ ಕಿಯಾ ಮೋಟರ್ಸ್ ಘಟಕವೊಂದರಿಂದ 900 ಎಂಜಿನ್‌ಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೆನುಕೊಂಡ ನ್ಯಾಯಾಲಯವು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಅಟೊಮೊಬೈಲ್ ಉದ್ಯಮವನ್ನು ಬೆಚ್ಚಿಬೀಳಿಸಿದ್ದ ಬೃಹತ್ ಪ್ರಮಾಣದ ಕಳ್ಳತನದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
‘ಕೇವಲ 10 ಶೇಕಡದಷ್ಟು ಮಾತ್ರ ತನಿಖೆ ಪೂರ್ಣಗೊಂಡಿದೆ. ಕಳವು ಮಾಡಿರುವ ಎಂಜಿನ್‌ಗಳನ್ನು ಆರೋಪಿಗಳು ಹಲವು ರಾಜ್ಯಗಳಿಗೆ ಕಳ್ಳಸಾಗಾಣೆ ಮಾಡಿ ಮಾರಾಟ ಮಾಡುತ್ತಿದ್ದರು. ಆಂಧ್ರಪ್ರದೇಶದ ಗಡಿಯಾಚೆಗೂ ಅಕ್ರಮ ಜಾಲವೊಂದು ಸಕ್ರಿಯವಾಗಿರುವ ಮುನ್ಸೂಚನೆ ಸಿಗುತ್ತಿದೆ’ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಕಿಯಾ ಅಧಿಕಾರಿಗಳು ಕಳೆದ ತಿಂಗಳು ಆಂತರಿಕ ಪರಿಶೀಲನೆ ನಡೆಸಿದ ವೇಳೆ ಎಂಜಿನ್‌ಗಳು ಕಳವಾಗಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಬಗ್ಗೆ ಮಾರ್ಚ್ 19ರಂದು ದೂರು ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.