ADVERTISEMENT

ಕೋಲ್ಕತ್ತ: ಶಸ್ತ್ರಾಸ್ತ್ರ, ಮಾದಕ ವಸ್ತು ದಂಧೆಯ ಕಿಂಗ್‌ಪಿನ್‌ ಬಂಧನ

ಪಿಟಿಐ
Published 14 ಮಾರ್ಚ್ 2023, 10:56 IST
Last Updated 14 ಮಾರ್ಚ್ 2023, 10:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಕೋಲ್ಕತ್ತದ ಬುರ್ರಾಬಜಾರ್ ನಗರದಲ್ಲಿ ಅವಿತಿದ್ದ ಬಿಹಾರ ಮೂಲದ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತು ದಂಧೆಯ ಕಿಂಗ್‌ಪಿನ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪತ್ತೆಗಾಗಿ ಬಿಹಾರದ ಸಿಐಡಿ ಮತ್ತು ಕೋಲ್ಕತ್ತ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು.

ಬಂಧಿತ ಆರೋಪಿಯನ್ನು ಅಹ್ಮದ್‌ ಅಲಿ ಎಂದು ಗುರುತಿಸಲಾಗಿದ್ದು, ಆರೋಪಿ ಭಾರತದ ಪೂರ್ವ ಭಾಗದಲ್ಲಿ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ಎಂದು ಆರೋಪಿಸಲಾಗಿದೆ.

ADVERTISEMENT

ಬಿಹಾರದಿಂದ ಪರಾರಿಯಾದ ನಂತರ ಆರೋಪಿಯೂ ಕೋಲ್ಕತ್ತದ ಬುರ್ರಾಬಜಾರ್ ನಗರದ ವಾಣಿಜ್ಯ ಕಟ್ಟಡವೊಂದರಲ್ಲಿ ಕಾರ್ಮಿಕನ ವೇಷದಲ್ಲಿ ತಲೆಮರೆಸಿಕೊಂಡಿದ್ದ.

ಭಾನುವಾರ ಬಿಹಾರದ ಸಿಐಡಿ ಮತ್ತು ಕೋಲ್ಕತ್ತ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.