ADVERTISEMENT

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಪತಿ ಜಾನ್ ಶಾ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2022, 10:45 IST
Last Updated 24 ಅಕ್ಟೋಬರ್ 2022, 10:45 IST
   

ಬೆಂಗಳೂರು: ಉದ್ಯಮಿ,ಬಯೋಕಾನ್ ಮುಖ್ಯಸ್ಥೆಕಿರಣ್ ಮಜುಂದಾರ್ ಶಾ ಅವರ ಪತಿ ಹಾಗೂ ಬಯೋಕಾನ್ ಇಂಡಿಯಾ ಮಾಜಿ ಉಪಾಧ್ಯಕ್ಷ ಜಾನ್ ಶಾ (65) ಸೋಮವಾರ ನಿಧನರಾಗಿದ್ದಾರೆ.

ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಂತ್ಯಕ್ರಿಯೆ ಬೆಂಗಳೂರಿನ ವಿಲ್ಸನ್ ಗಾರ್ಡನ್‌ ಸ್ಮಶಾನದಲ್ಲಿ ಸೋಮವಾರ ಸಂಜೆ ನೆರವೇರಲಿದೆ.

1999 ರಿಂದ ಜಾನ್‌ ಶಾ ಅವರು ಬಯೋಕಾನ್‌ನ ವಿವಿಧ ಉನ್ನತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ADVERTISEMENT

ಇಂಗ್ಲೆಂಡ್ ಮೂಲದವರಾಗಿದ್ದ ಜಾನ್ ಶಾ ಅವರು ಗ್ಲಾಸ್ಗೋ ವಿಶ್ವವಿದ್ಯಾಲಯದ ‍ಪದವೀದರರಾಗಿದ್ದರು. ಶಾ ನಿಧನಕ್ಕೆ ಔಧ್ಯೋಗಿಕ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.